newsics.com
ಆಸಿಫಾಬಾದ್(ತೆಲಂಗಾಣ): ತನ್ನ ಪ್ರಾಣ ಪಣಕ್ಕಿಟ್ಟು ಹುಲಿ ದಾಳಿಯಿಂದ ತನ್ನ ಪತಿಯನ್ನು ರಕ್ಷಿಸಿದ ಘಟನೆ ತೆಲಂಗಾಣದ ಆಸಿಫಾಬಾದ್ನ ಸಿರ್ಪುರ (ಟಿ) ಮಂಡಲದ ದುಬ್ಬಗುಡ ಗ್ರಾಮದಲ್ಲಿ ನಡೆದಿದೆ.
ಸುಜಾತಾ ಇಂಥದ್ದೊಂದು ಸಾಹಸ ತೋರಿದ ರೈತ ಮಹಿಳೆ. ಇವರ ಪತಿ ಸುರೇಶ್ ಹುಲಿ ದಾಳಿಗೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಸುಜಾತಾ ತನ್ನ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿ ಆತನ ಪ್ರಾಣ ಉಳಿಸಿದ್ದಾರೆ.
ಸುಜಾತಾ ತಮ್ಮ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದರು. ಹುಲಿ ಅವಿತುಕೊಂಡಿರುವುದನ್ನು ಅರಿಯದ ಪತಿ ಸುರೇಶ್ ಎತ್ತಿನ ಗಾಡಿಯೊಂದಿಗೆ ಬರುತ್ತಿದ್ದರು. ಹತ್ತಿರ ಬರುತ್ತಿದ್ದಂತೆಯೇ ಹುಲಿ ಮೇಲೆರಗಿದೆ. ಕುತ್ತಿಗೆ ಪರಚಿದೆ. ಸ್ವಲ್ಪ ದೂರದಲ್ಲಿದ್ದ ಸುಜಾತಾ ಓಡಿ ಬಂದು ಪಕ್ಕದಲ್ಲಿ ಬಿದ್ದಿದ್ದ ಕಲ್ಲು ಮತ್ತು ಕೋಲು ಹಿಡಿದು ಜೋರಾಗಿ ಕೂಗುತ್ತಾ ಹುಲಿಯನ್ನು ಹಿಮ್ಮೆಟ್ಟಿಸಿದ್ದಾರೆ. ಹುಲಿ ಉಗುರುಗಳಿಂದ ಪರಚಿದ್ದರಿಂದ ಸುರೇಶ್ ಅವರ ಎದೆಗೂ ಗಾಯವಾಗಿದೆ. ನೆರೆಹೊರೆ ರೈತರ ನೆರವಿನಿಂದ ಸುಜಾತಾ ತನ್ನ ಪತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹುಲಿ ದಾಳಿ ಮಾಡಿದಾಗ ನಾನು ನನ್ನ ಪ್ರಾಣದ ಬಗ್ಗೆ ಯೋಚಿಸಲಿಲ್ಲ. ಗಂಡನನ್ನು ಉಳಿಸುವ ಬಗ್ಗೆ ಮಾತ್ರ ಯೋಚಿಸಿದೆ. ಅರೆಕ್ಷಣ ಹಿಂಜರಿದಿದ್ದರೂ ಗಂಡನನ್ನು ಕಳೆದುಕೊಳ್ಳಬೇಕಾಗಿತ್ತು ಎಂದು ಸುಜಾತಾ ಹೇಳಿದರು.
ಇದೇ ಪ್ರದೇಶದಲ್ಲಿ 21 ವರ್ಷದ ಮಹಿಳೆ ಹುಲಿ ದಾಳಿಯಿಂದ ಮೃತಪಟ್ಟ ಘಟನೆ ನಡೆದಿತ್ತು. ಇದಾಗಿ ಒಂದು ದಿನದ ನಂತರ ಈ ಘಟನೆ ನಡೆದಿದೆ.
Postpartum death ಬಳ್ಳಾರಿ ಬಿಮ್ಸ್ನಲ್ಲಿ ಮತ್ತೋರ್ವ ಬಾಣಂತಿ ಸಾವು, ಮೃತರ ಸಂಖ್ಯೆ ಐದಕ್ಕೇರಿಕೆ
KMF MD Transfer ಕೆಎಂಎಫ್ ಎಂಡಿ ಜಗದೀಶ್ ದಿಢೀರ್ ವರ್ಗಾವಣೆ: ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ,ಕೇರಳ ಲಾಬಿ ಶಂಕೆ
Double murder: ಪ್ರೀತಿಗೆ ಅಡ್ಡಿ – ತಲೆ ಕೊಚ್ಚಿ ಮೆದುಳು ಹೊರತೆಗೆದ ಯುವಕ