newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಕಾರ್ತೀಕ ಮಾಸ ಕೃಷ್ಣ ಪಕ್ಷ ದಶಮಿ
25-11-2024, ಸೋಮವಾರ
* ಕೊನೇ ಕಾರ್ತೀಕ ಸೋಮವಾರ
* ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಅಂತಾರಾಷ್ಟ್ರೀಯ ದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 25/11/2024
ತಿಂಗಳು – ನವೆಂಬರ್
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ದಶಮಿ 25:01:09*
ಪಕ್ಷ – ಕೃಷ್ಣ
ನಕ್ಷತ್ರ – ಉತ್ತರ ಫಲ್ಗುಣಿ 25:22:55*
ಯೋಗ – ವಿಷ್ಕುಂಭ 13:10:35
ಕರಣ – ವಣಿಜ 11:38:46
ಕರಣ – ವಿಷ್ಟಿ 25:01:09
ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ವೃಶ್ಚಿಕ
ಋತು ಶರದೃತು
ಸೂರ್ಯೋದಯ 06:24:15
ಸೂರ್ಯಾಸ್ತ 17:49:08
ಹಗಲಿನ ಅವಧಿ 11:24:53
ರಾತ್ರಿಯ ಅವಧಿ 12:35:37
ಚಂದ್ರೋದಯ 26:17:16*
ಚಂದ್ರಾಸ್ತ 13:57:16
ರಾಹು ಕಾಲ 07:50 – 09:15 ಅಶುಭ
ಯಮಘಂಡ ಕಾಲ 10:41 – 12:07 ಅಶುಭ
ಗುಳಿಕ ಕಾಲ 13:32 – 14:58
ಅಭಿಜಿತ್ 11:44 – 12:30 ಶುಭ
ದುರ್ಮುಹೂರ್ತ 12:30 – 13:15 ಅಶುಭ
ದುರ್ಮುಹೂರ್ತ 14:47 – 15:32 ಅಶುಭ
—–
ಇಂದಿನ ಮಾತು
ಬದಲಿಸಲಾಗದೇ ಇರುವ ವಿಚಾರಗಳ ಯೋಚನೆಗಳಲ್ಲೇ ನಾವು ಬಂದಿಯಾಗಬಾರದು. ಅದರ ಪಾಡಿಗೆ ಅದು ಪಥ ಬದಲಿಸಲು ಬಿಟ್ಟುಬಿಡಬೇಕು.
– ಟೋನಿ ಗಸ್ಕಿನ್
——
ಇಂದಿನ ಸುಭಾಷಿತ
ಆದಾತುಮಿಚ್ಛನ್ ಪದಮುತ್ತಮಾನಾಂ
ಸ್ವಚೇತಸೈವಾಪಹತೋಽದ್ಯ ಲೋಕಃ |
ಪತತ್ಯಶಂಕಂ ಪಶುರದ್ರಿಕೂಟಾ-
ದಾನೀಲವಲ್ಲೀ ಫಲವಾಂಛಯೈವ ||
(ಯೋಗವಾಸಿಷ್ಠ)
ಹೆಚ್ಚಿನ ಭೋಗಗಳನ್ನು ಬಯಸಿ ಅದಕ್ಕಾಗಿ ಆಸೆಪಡುವವರು, ಬೆಟ್ಟದ ತುದಿಯಲ್ಲಿ ಅಷ್ಟಗಲಕ್ಕೂ ಹಬ್ಬಿರುವ ಬಳ್ಳಿಯ ಹಣ್ಣನ್ನು ತಿನ್ನುವೆನೆಂದು ನಿಶ್ಶಂಕೆಯಿಂದ ಹೋಗಿ ಕಮರಿಯಲ್ಲಿ ಬೀಳುವ ಪಶುವಿನಂತೆ ಆ ಆಸೆಯಿಂದಲೇ ಮೋಸಹೋಗಿ ಇನ್ನೂ ಕೆಳಗೆ ಬೀಳುವರು.
🌷🌺🌷