newsics.com
ಬೆಂಗಳೂರು: ಬಿಗ್ ಬಾಸ್ ಹನುಮಂತಣ್ಣನಿಗೆ ಸುದೀಪ್ ಅವರು ಹೊಸ ಹೊಸ ರಾಶಿ ಬಟ್ಟೆ ಕಳಿಸಿ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಮನೇಲಿ ವಾರಾಂತ್ಯದ ವೀಕೆಂಡ್ ಪಂಚಾಯಿತಿಗೆ ಅದ್ಧೂರಿಯಾಗಿ ರೆಡಿ ಆಗಿರುತ್ತಾರೆ. ಆದರೆ ಹನುಮಂತ ಮಾತ್ರ ಅದೇ ಪಂಚೆ-ಶರ್ಟ್ ಧರಿಸಿ ವಾರದ ಪಂಚಾಯ್ತಿಗೆ ಹಾಜರಾಗುತ್ತಿದ್ದರು. ಇದನ್ನು ಗಮನಿಸಿದ ಕಿಚ್ಚ ಸುದೀಪ್, ಯಾಕೆ ಅವರಂತೆ ಒಳ್ಳೆ ಬಟ್ಟೆ ಧರಿಸಿಲ್ಲ ಎಂದು ಕೇಳಿದರು. ಅದಕ್ಕೆ ಹನುಮಂತ, ‘ನನ್ನ ಬಳಿ ಛಲೊ ಬಟ್ಟಿ ಇಲ್ರಿ’ ಎಂದು ಬೇಸರದಿಂದ ಹೇಳಿದ್ದ, ಅದಕ್ಕೆ ಸುದೀಪ್, ‘ನಾನು ನನ್ನ ಡಿಸೈನರ್ಗೆ ಹೇಳಿ ಬಟ್ಟೆ ಕಳಿಸುತ್ತೀನಿ ಹಾಕಿಕೊಳ್ತೀರಾ?’ ಎಂದು ಕೇಳಿದ್ದರು. ಅದಕ್ಕೆ ಖುಷಿಯಿಂದ ಒಪ್ಪಿಕೊಂಡಿದ್ದ ಹನುಮಂತು.
ಸುದೀಪ್, ಹನುಮಂತನಿಗಾಗಿ ಹಲವು ಡಿಸೈನರ್ ಬಟ್ಟೆಗಳನ್ನು ಕಳಿಸಿಕೊಟ್ಟಿದ್ದಾರೆ. ಅಂಡರ್ವೇರ್ ಸಮೇತ. ಅದೂ ಜನಪ್ರಿಯ ಬ್ರ್ಯಾಂಡ್ನ ದುಬಾರಿ ಬಟ್ಟೆಗಳನ್ನೇ ಕಳಿಸಿದ್ದಾರೆ. ಉಡುಗೊರೆ ಸ್ವೀಕರಿಸಿದ ಹನುಮಂತು ಕ್ಷಣ ಕಾಲ ಭಾವುಕರಾದರು.
https://www.instagram.com/reel/DCqmwkvszb-/?igsh=MW0xbWY0bTNwdHhwdg==