newsics.com
ಮುಂಬೈ : ಸಲ್ಮಾನ್ ಖಾನ್ ‘ಸಿಖಂದರ್’ ಸಿನಿಮಾಗ ಬ್ರೇಕ್ ಸಿಕ್ಕ ಬೆನ್ನಲ್ಲೇ ತಂದೆಯ ಮೊದಲ ಬೈಕ್ ಏರಿ ಫೋಟೋಶೂಟ್ ಮಾಡಿಸಿದ್ದಾರೆ.
ತಂದೆ ಸಲೀಂ ಖಾನ್ ಮತ್ತು ಬೈಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಂದೆ ಸಲೀಂ ಖಾನ್ ಬೈಕ್ ಏರಿ ಮಗನ ಕಡೆ ಪೋಸ್ ನೀಡಿದ್ದಾರೆ. ಅವರೊಂದಿಗೆ ನಿಂತು ಸಲ್ಮಾನ್ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ ತಂದೆಯ ಬೈಕ್ ಏರಿ ಸಲ್ಮಾನ್ ಕುಳಿತಿದ್ದಾರೆ. ಸದ್ಯ ಈ ಪೋಸ್ಟ್ಗೆ ಬಗೆ ಬಗೆಯ ಕಾಮೆಂಟ್ಗಳು ಹರಿದು ಬರುತ್ತಿವೆ.
1956ರ ‘Triumph Tiger 100’ ಎನ್ನುವ ಬೈಕ್ ಅನ್ನ ಖರೀದಿಸಿದ್ದರು. ಆಗಿನ ಈ ಒಂದು ಬೈಕ್ ಅನ್ನ ಸಲ್ಮಾನ್ ತುಂಬಾನೇ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಹಾಗೇನೇ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.