newsics.com
ಮುಂಬೈ : ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಪತ್ನಿ ಸಾಯಿರಾ ಬೇರ್ಪಡುವುದಾಗಿ ಘೋಷಿಸಿದ್ದಾರೆ.
ಮದುವೆಯಾಗಿ ಹಲವು ವರ್ಷಗಳ ನಂತರ, ಸಾಯಿರಾ ಅವರು ತಮ್ಮ ಪತಿ ಎಆರ್ ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇವರ ಸಂಬಂಧದಲ್ಲಿ ಆಳವಾದ ಭಾವನಾತ್ಮಕ ಒತ್ತಡದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಒಬ್ಬರಿಗೊಬ್ಬರ ನಡುವೆ ಪ್ರೀತಿ ಇದ್ದರೂ, ತಮ್ಮ ನಡುವೆ ಆಗುವ ಮನಸ್ತಾಪಗಳು ಹಾಗೂ ಸಮಸ್ಯೆಗಳು ದೊಡ್ಡ ಅಂತರವನ್ನು ಸೃಷ್ಟಿಸಿದೆ ಎಂಧು ದಂಪತಿಗಳು ಕಂಡುಕೊಂಡಿದ್ದಾರೆ. ಈ ಹಂತದಲ್ಲಿ ಯಾರೂ ಕೂಡ ತಮ್ಮ ನಡುವೆ ಸೇತುವೆಯಾಗಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಾರೆ. ಈ ಕಾರಣದಿಂದಾ ಸಾಯಿರಾ ಅವರು ನೋವು ಹಾಗೂ ಸಂಕಟದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಹೇಳಲಾಗಿದೆ.