newsics.com
ನವದೆಹಲಿ : ಖ್ಯಾತ ನಟ-ನಟಿಯರನ್ನು ಇನ್ನಿಲ್ಲದಂತೆ ಕಾಡುತ್ತಿರುವ deepfake ಉಪಟಳ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಗೂ ತಟ್ಟಿದೆ.
ಆರ್ ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಅವರ ಡೀಪ್ ಫೇಕ್ ವಿಡಿಯೋ ಮೂಲಕ ದುಷ್ಕರ್ಮಿಗಳು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಉನ್ನತ ನಿರ್ವಹಣೆಯ ಮುಖ್ಯಸ್ಥರ ಹೆಸರಲ್ಲಿ ಡೀಪ್‌ಫೇಕ್ ವೀಡಿಯೊಗಳು ಹರಿದಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಆರ್ಥಿಕ ಸಲಹೆಯನ್ನು ನೀಡುವುದರ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.