newsics.com
ಸೆಕ್ಸ್ ಅನ್ನೋದು ಒಂದು ರೀತಿ ಹಸಿವು ಮತ್ತು ದಾಹವಿದ್ದಂತೆ. ಎಷ್ಟು ಬಾರಿ ದೈಹಿಕ ಸಂಪರ್ಕ ಬೆಳೆಸಿದರೂ ಮತ್ತೆ, ಮತ್ತೆ ಬೇಕನಿಸುತ್ತದೆ.
ಆದರೆ ಹೆಚ್ಚು ಸೆಕ್ಸ್ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಇಲ್ಲಿದೆ..
ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಲೈಂಗಿಕತೆಯನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಪ್ರತಿಯೊಬ್ಬರೂ ತಮ್ಮ ದೇಹ ಮತ್ತು ಆರೋಗ್ಯವನ್ನು ಅವಲಂಬಿಸಿ ಕೆಲವು ಮಿತಿಗಳನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ ನೀವು ಹೆಚ್ಚಾಗಿ ಲೈಂಗಿಕತೆಯನ್ನು ಹೊಂದಿದ್ದರೆ ಕೆಲವು ತೊಂದರೆಗಳು ಉಂಟಾಗುತ್ತವೆ.
ಆದರೆ ಅತಿಯಾದ ಸೆಕ್ಸ್ ಮಹಿಳೆಯರಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೌದು, ಸ್ತ್ರೀ ಜನನಾಂಗದ ಪ್ರದೇಶದಲ್ಲಿ ಊತ ಉಂಟಾಗುತ್ತದೆ. ಈ ಸಮಸ್ಯೆಗಳಿಂದ ಅನೇಕ ಮಹಿಳೆಯರು ಲೈಂಗಿಕತೆಯ ಸಮಯದಲ್ಲಿ ದೂರ ಉಳಿಯಲು ಇಷ್ಟಪಡುತ್ತಾರೆ.
ವಾಸ್ತವವಾಗಿ ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಸಂಭೋಗ ನಡೆಸಿದರೆ ಜನನಾಂಗಗಳಲ್ಲಿ ಲ್ಯೂಬ್ ಕ್ಷೀಣಿಸುತ್ತದೆ. ಆಗಾಗ ಸಂಭೋಗಿಸುವ ಮಹಿಳೆಯರಿಗೆ ಮೂತ್ರಕೋಶ ಮತ್ತು ಯೋನಿ ಸೋಂಕುಗಳು ಹೆಚ್ಚುವ ಸಾಧ್ಯತೆ ಹೆಚ್ಚು. ಇದು ಮೂತ್ರ ವಿಸರ್ಜನೆಯ ಸಮಯದಲ್ಲಿ ಸುಡುವ ಸಂವೇದನೆಯನ್ನು ಉಂಟುಮಾಡುತ್ತದೆ.
ಇದರೊಂದಿಗೆ ಯೋನಿಯಲ್ಲಿ ಉರಿ, ಮೂತ್ರದ ಹರಿವು, ದುರ್ವಾಸನೆ, ತುರಿಕೆ ಮುಂತಾದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಅಂತಹ ವೇಳೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಇನ್ನು ಮುಟ್ಟು ನಿಂತ ಮೇಲೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತೋ ಅಥವಾ ಕಡಿಮೆ ಆಗುತ್ತೋ ಎಂಬ ಬಗ್ಗೆ ಅನೇಕ ಮಂದಿ ಗೊಂದಲ ಹೊಂದಿದ್ದಾರೆ.
ಸಾಮಾನ್ಯವಾಗಿ ಮುಟ್ಟು ನಿಂತ ನಂತರ ಗರ್ಭಿಣಿಯಾಗುವ ಸಾಧ್ಯತೆ ಇಲ್ಲದೇ ಇರುವುದರಿಂದ ಕೆಲ ಮಹಿಳೆಯರಿಗೆ ಇದು ಟೆನ್ಷನ್ ಫ್ರೀ ಸಮಯವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಅಡ್ಡಿ-ಆತಂಕವಿಲ್ಲದೇ ತಮ್ಮ ಸಂಗಾತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ಇಚ್ಛಿಸುತ್ತಾರೆ.
ಅಲ್ಲದೇ ಕೆಲ ಹಾರ್ಮೋನ್ ಬದಲಾವಣೆಗಳಿಂದ ಕೂಡ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಏನೇ ಆದರೂ ಅತಿಯಾದ ಸೆಕ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ.
ಬಿಯರ್ ಕುಡಿಯುವ ಮುನ್ನ ಇದನ್ನೊಮ್ಮೆ ಓದಿಬಿಡಿ, ಬಿಯರ್ನಿಂದ ಅಪಾಯವೂ ಇದೆ…!