Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಯುವತಿಯ ಹುಚ್ಚಾಟ, 800 ಮನೆಗಳಿಗೆ ಪವರ್ ಕಟ್, ವಿಡಿಯೋ ನೋಡಿ
ಪ್ರಮುಖವಿದೇಶವೈರಲ್

ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಯುವತಿಯ ಹುಚ್ಚಾಟ, 800 ಮನೆಗಳಿಗೆ ಪವರ್ ಕಟ್, ವಿಡಿಯೋ ನೋಡಿ

Share
2 Min Read
SHARE

newsics.com

ಯುವತಿಯೊಬ್ಬಳು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದ್ದಾಳೆ. ಬಳಿಕ ಹೈಟೆನ್ಶನ್ ವೈಯರ್ ಮೇಲೆ ಕಸರತ್ತು ಆರಂಭಿಸಿದ್ದಾಳೆ.

ಯುವತಿ ಟ್ರಾನ್ಸ್‌ಫಾರ್ಮರ್ ಹತ್ತುವುದನ್ನು ಗಮನಿಸಿದ ವಿದ್ಯುತ್ ಇಲಾಖೆ ಸಿಬ್ಬಂದಿಗಳು ತಕ್ಷಣವೇ ವಿದ್ಯುತ್ ಪ್ರಸರಣ ನಿಲ್ಲಿಸಿದ್ದಾರೆ. ಬಳಿಕ ಎಷ್ಟೇ ಮನವಿ ಮಾಡಿದರೂ ಯುವತಿ ಕೆಳಗಿಳಿಯಲಿಲ್ಲ. ಇತ್ತ 800ಕ್ಕೂ ಹೆಚ್ಚು ಮನೆಗಳು ಯುವತಿಯ ಕಾರಣದಿಂದ ಕತ್ತಲಲ್ಲಿ ಕಳೆಯಬೇಕಾಗಿ ಬಂದ ಪರಿಸ್ಥಿತಿ ಅಮೆರಿಕದ ಉಟ್ಹದಲ್ಲಿ ಉಂಟಾಗಿದೆ.

ಸಾಲ್ಟ್ ಲೇಕ್ ಸಿಟಿ ಸೇರಿದಂತೆ ಒಂದು ಸಂಪೂರ್ಣ ಭಾಗ ಕತ್ತಲಲ್ಲಿ ಮುಳುಗಿದ ಘಟನೆ ನಡೆದಿದೆ. ಇದಕ್ಕೆ ಯುವತಿ ಟ್ರಾನ್ಸ್‌ಫಾರ್ಮರ್ ಬಾಕ್ಸ್ ಮೇಲಿನ ಮಕ್ಕಳಾಟ ಕಾರಣ.

ಗ್ಲಾಡೋಲಿಯಾ ಸ್ಟ್ರೀಟ್ ಬಳಿ ಇರುವ ವಿದ್ಯುತ್ ಘಟಕ ನಗರ ಹಾಗೂ ರೆಸಿಡೆನ್ಸಿ ವಲಯಕ್ಕೆ ವಿದ್ಯುತ್ ಪೂರೈಸುತ್ತಿದೆ. ಇದಕ್ಕಿದ್ದಂತೆ ವಿದ್ಯುತ್ ಘಟಕ್ಕೆ ಆಗಮಿಸಿದ ಯುವತಿ ನೇರವಾಗಿ ಟ್ರಾನ್ಸ್‌ಫಾರ್ಮ್ ಕಂಬದ ಬಳಿ ಬಂದಿದ್ದಾಳೆ. ಬಳಿಕ ಟ್ರಾನ್ಸ್‌ಫಾರ್ಮರ್ ಹತ್ತಿದ್ದಾಳೆ.

ಯುವತಿ ಟ್ರಾನ್ಸ್‌ಫಾರ್ಮರ್ ಕಂಬ ಹತ್ತುತ್ತಿದ್ದಂತೆ ವಿದ್ಯುತ್ ಘಟಕದ ಸಿಬ್ಬಂದಿಗಳು ವಿದ್ಯುತ್ ಪ್ರಸರಣ ನಿಲ್ಲಿಸಿದ್ದಾರೆ. ಬಳಿಕ ಯುವತಿಯನ್ನು ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಆದರೆ ಸಿಬ್ಬಂದಿಯ ಮಾತನ್ನು ಯುವತಿ ಕೇಳಲೇ ಇಲ್ಲ. ಹೀಗಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣವೇ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರ ಮಾತನ್ನೂ ಯುವತಿ ಕೇಳಿಲ್ಲ. ಹೈಟೆನ್ಶನ್ ವೈಯರ್ ಹತ್ತಿ ನೇತಾಡಲು ಆರಂಭಿಸಿದ್ದಾಳೆ. ಒಂದು ಘಟಕದ ವಿದ್ಯುತ್ ಸಂಪೂರ್ಣ ನಿಲ್ಲಿಸಿದ್ದಾರೆ. ಯುವತಿ ಇದೇ ರೀತಿ ಮಾಡಿ ಪಕ್ಕದಲ್ಲಿರುವ ಮತ್ತೊಂದು ಟ್ರಾನ್ಸ್‌ಫಾರ್ಮರ್ ಬಾಕ್ಸ್ ಹತ್ತಿದರೆ ಅಪಾಯ ಖಚಿತ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ತಕ್ಷಣ ಕೆಳಗಿಳಿಯದಿದ್ದರೆ ಶೂಟ್ ಮಾಡುವುದಾಗಿ ಪೊಲೀಸರು ಸಂದೇಶ ನೀಡಿದ್ದಾರೆ. ಆದರೆ ಯುವತಿ ಮಾತ್ರ ಇದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಇತ್ತ ಪೊಲೀಸರು ಏರ್ ಗನ್ ರೀತಿಯ ಲೀಥಲ್ ಗನ್ ಬಳಸಿ ಯುವತಿ ಕಾಲಿಗೆ ಶೂಟ್ ಮಾಡಿದ್ದಾರೆ. ಪೊಲೀಸರ ಲೀಥಲ್ ಗನ್ ಶಾಟ್‌ನಿಂದ ಯುವತಿ ಕೆಳಕ್ಕೆ ಬಿದ್ದಿದ್ದಾಳೆ. ತಕ್ಷಣವೇ ಯುವತಿಯನ್ನು ರಕ್ಷಿಸಿದ ಪೊಲೀಸರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೇಲಿಂದ ಬಿದ್ದ ಕಾರಣ ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇತ್ತ ಲೀಥಲ್ ಗನ್ ಶಾಟ್‌ನಿಂದಲೂ ಗಾಯವಾಗಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಯುವತಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ. ಹೀಗಾಗಿ ಅತಿರೇಕದ ಪ್ರಯತ್ನ ಮಾಡಿದ್ದಾಳೆ.

ಸದ್ಯ ವೈದ್ಯರ ನಿಗಾದಲ್ಲಿರುವ ಯುವತಿಯನ್ನು ಶೀಘ್ರದಲ್ಲೇ ಆರೈಕೆ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಯುವತಿ ಕುಟುಂಬಸ್ಥರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ವೈದ್ಯರ ವರದಿ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

https://twitter.com/i/status/1857180056935973288

ಕಿಚ್ಚನ ಖಡಕ್ ಮಾತಿಗೆ ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ; ಮಾತಾಡಲು ಕಷ್ಟಪಟ್ಟ ಫೈರ್ ಬ್ರ್ಯಾಂಡ್!

ಬಿಗ್ ಬಾಸ್‌ ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ ಲಾಯರ್ ಜಗದೀಶ್?

ಗಂಟೆಗಟ್ಟಲೆ ‘ಮೊಬೈಲ್’ ಬಳಸುತ್ತೀರಾ..? ಈ ಸಮಸ್ಯೆ ಕಾಡಬಹುದು ಎಚ್ಚರ..!

ಹವಾಮಾನ ಬದಲಾವಣೆಯಿಂದ ಭಾರತೀಯರು ದೈಹಿಕವಾಗಿ, ಮಾನಸಿಕವಾಗಿ ದುರ್ಬಲ

ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಮಾಡೋದು ಇದನ್ನೇ!

TAGGED:power cut to 800 houseswatch the videoYoung woman's obsession with power transformer
Share This Article
Facebook Twitter Copy Link Print
Previous Article ಇಂದು ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ
Next Article ಕಾರು- ಬಸ್ ಡಿಕ್ಕಿ: ಕಾಟೇರ ಸಿನಿಮಾ ಬಾಲನಟ ರೋಹಿತ್ ಸೇರಿ ಹಲವರಿಗೆ ಗಾಯ

Popular Posts

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

You Might Also Like

ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?