newsics.com
ಹರಿಯಾಣ : ಹರಿಯಾಣದ ಬೃಹತ್ ಗಾತ್ರದ ಕೋಣ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ.
ಅನ್ಮೋಲ್ ಹೆಸರಿನ ಕೋಣಕ್ಕೆ ಬರೋಬ್ಬರಿ 23 ಕೋಟಿ ರೂ. ನಿಗದಿಪಡಿಸಿಸಲಾಗಿದೆ. 8 ವರ್ಷದ ಈ ಕೋಣ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಈ ಕೊಬ್ಬಿದ ಕೋಣ ಬರೋಬ್ಬರಿ 1500 ಕೆಜಿ ತೂಕವಿದೆ. ಹರಿಯಾಣದ ಸಿರ್ಸಾ ಜಿಲ್ಲೆಯ ಹಿಸ್ಸು ಗ್ರಾಮದ ನಿವಾಸಿ ಪಾಲ್ಮಿಂದ್ರ ಗಿಲ್ ಅವರ ಈ ಕೋಣ ತನ್ನ ದೈತ್ಯಾಕಾರದಿಂದಲೇ ಹೆಸರುವಾಸಿಯಾಗಿದೆ.
ಮೀರತ್ ಸೇರಿ ಸುತ್ತಮುತ್ತಲಿನ ವ್ಯವಸಾಯ ಸಂಬಂಧಿತ ಕಾರ್ಯಕ್ರಮ, ಪುಷ್ಕರ್ ಮೇಳ ಹಾಗೂ ಅನ್ನದಾತರ ಸಮಾವೇಶದಲ್ಲಿ ಅನ್ಮೋಲ್ ಗೆ ಭಾರೀ ಬೇಡಿಕೆ ಬಂದಿದೆ. ಇದಕ್ಕೆ ಹಣ್ಣು, ಮೊಟ್ಟೆ, ಜೋಳ, ಸೋಯಾಬೀನ್, ದೇಸಿ ತುಪ್ಪ, ಹಾಲು, ಎಣ್ಣೆ ಕೇಕ್ ಮತ್ತು ಹಸಿರು ಮೇವನ್ನು ತಿನ್ನಿಸಲಾಗುತ್ತಂತೆ. ಇದರ ಆಹಾರಕ್ಕಾಗಿಯೇ ದಿನಕ್ಕೆ 1 ಸಾವಿರದಿಂದ 1,500 ರೂಪಾಯಿ ಖರ್ಚಾಗುತ್ತದೆ ಎನ್ನಲಾಗಿದೆ.
‘ಅನ್ಮೋಲ್’ ಕೋಣದ ವೀರ್ಯಾಣುವಿಗೂ ಸಖತ್ ಡಿಮ್ಯಾಂಡ್ ಬಂದಿದ್ದು, ತಳಿ ಅಭಿವೃದ್ಧಿಪಡಿಸಲು ಹಲವರು ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಪ್ರಸಿದ್ಧಿಗಾಗಿ ಗೆಳೆಯನ ಜತೆಗಿನ ತಮ್ಮದೇ ಖಾಸಗಿ ವಿಡಿಯೊ ಲೀಕ್ ಮಾಡಿದ್ರಾ ಟಿಕ್‌ಟಾಕ್ ತಾರೆ? ವೈರಲ್ ಆಯ್ತು ವಿಡಿಯೊ