newsics.com
ಬೆಂಗಳೂರು; ಇತ್ತೀಚಿನ ಕೆಲ ದಿನಗಳ ಏರಿಕೆ ನೋಡಿ, ಎಲ್ಲರ ಬಾಯಲ್ಲೂ ಗೋಲ್ಡ್ ರೇಟ್‌ನದ್ದೇ ಮಾತಾಗಿದೆ. ಏನಪ್ಪಾ, ಹೀಗೆ ದಿನ ದಿನ ಏರಿಕೆಯಾಗ್ತಿದೆ, ಮದುವೆ, ಹಬ್ಬಗಳಿಗೆ ಖರೀದಿ ಮಾಡೋದು ಹೇಗೆ ಅನ್ನೋ ಚಿಂತೆ ಕಾಡ್ತಿದೆ. ಆದರೆ ನಿನ್ನೆ, ಮೊನ್ನೆಯ ಚಿನ್ನದ ಬೆಲೆ ಇಳಿಕೆ ಕಂಡಿತ್ತು ಮತ್ತು ಗ್ರಾಹಕರಿಗೂ ಖುಷಿಯಾಗಿತ್ತು. ಈ ಖುಷಿ ಇಂದು ಮತ್ತೆ ಡಬಲ್ ಆಗಿದೆ, ಏಕೆಂದರೆ ನಿನ್ನೆಗಿಂತ ಮತ್ತೆ ಗೋಲ್ಡ್ ರೇಟ್ ಇಳಿಕೆಯಾಗಿದೆ.
ಹೌದು, ಚಿನ್ನದ ಬೆಲೆ ಇಂದು ಗ್ರಾಮ್ಗೆ 110 ರೂನಷ್ಟು ಕುಸಿತ ಕಂಡಿದೆ. ಅಪರಂಜಿ ಚಿನ್ನದ ಬೆಲೆ 120 ರೂನಷ್ಟು ಇಳಿದಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 435 ರೂನಷ್ಟು ಕುಸಿತ ಕಂಡಿದೆ. ಬೆಲೆಯೂ ಕುಸಿತದದಲ್ಲಿ ಚಿನ್ನಕ್ಕೆ ಪೈಪೋಟಿ ನೀಡುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 14ಕ್ಕೆ)
- 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 69,350 ರೂ
- 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 75,650 ರೂ
- 18 ಕ್ಯಾರಟ್ ನ10 ಗ್ರಾಂ ಚಿನ್ನದ ಬೆಲೆ: 56,740 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 89.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 69,350 ರೂ
- 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 75,650 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 89.50 ರೂ