newsics.com
ಮುಂಬೈ : ಎ.ಆರ್. ರೆಹಮಾನ್ ಅವರು ಒಂದು ಹಾಡಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಆಸ್ಕರ್ ಪ್ರಶಸ್ತಿ ಪಡೆದಿರುವ ಅವರು ಸಾವಿರಾರು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಹಾಗೂ ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ ಎ.ಆರ್. ರೆಹಮಾನ್ ಅವರು ದುಬಾರಿ ಸಂಭಾವನೆ ಪಡೆಯುತ್ತಾರೆ.
ವರದಿಗಳ ಪ್ರಕಾರ, ಒಂದು ಹಾಡಿಗೆ ಧ್ವನಿ ನೀಡಲು ಅವರು ಪಡೆಯುವ ಸಂಭಾವನೆ 3 ಕೋಟಿ ರೂಪಾಯಿ! ಸ್ಟಾರ್ ಸಿಂಗರ್ಸ್ ಎನಿಸಿಕೊಂಡ ಸೋನು ನಿಗಮ್, ಶ್ರೇಯಾ ಘೋಷಾಲ್ ಮುಂತಾದವರ ಸಂಭಾವನೆಗಿಂತಲೂ ಇದು 15 ಪಟ್ಟು ಅಧಿಕ ಮೊತ್ತ
ಎ.ಆರ್. ರೆಹಮಾನ್ ಅವರು ಪೂರ್ಣಾವಧಿ ಸಿಂಗರ್ ಅಲ್ಲ. ಅಂದರೆ, ಅವರ ಮುಖ್ಯ ಕಸುಬು ಹಾಡುಗಾರಿಕೆ ಅಲ್ಲ. ಸಂಗೀತ ನಿರ್ದೇಶಕನಾಗಿ ಅವರು ಬ್ಯುಸಿ ಆಗಿದ್ದಾರೆ. ಹಾಗಿದ್ದರೂ ಕೂಡ ಅಲ್ಲೊಂದು ಇಲ್ಲೊಂದು ಹಾಡುಗಳಿಗೆ ಮಾತ್ರ ಅವರು ಧ್ವನಿ ನೀಡುತ್ತಾರೆ. ಅವರಿಂದ ಒಂದು ಹಾಡು ಹಾಡಿಸಬೇಕು ಎಂದರೆ ನಿರ್ಮಾಪಕರು 3 ಕೋಟಿ ರೂಪಾಯಿ ನೀಡಬೇಕು