newsics.com
ಬಾಂಗ್ಲಾದೇಶದ ಹಂಗಾಮಿ ಪ್ರಧಾನಿ ಮುಹಮ್ಮದ್ ಯೂನಸ್ ವಿರುದ್ಧ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್‌ನಲ್ಲಿ ನರಮೇಧದ ದೂರು ದಾಖಲಿಸಲಾಗಿದೆ.
ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಮತ್ತು ಇತರ 62 ಮಂದಿ ವಿರುದ್ಧ ರೋಮ್ ಶಾಸನದ 15ನೇ ವಿಧಿಯಡಿ ನೆದರ್‌ಲ್ಯಾಂಡ್ಸ್‌ನ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ (ಐಸಿಸಿ) ದೂರು ದಾಖಲಿಸಲಾಗಿದೆ. ಅವಾಮಿ ಲೀಗ್ ಮುಖಂಡ ಮತ್ತು ಸಿಲ್ಹೆಟ್ನ ಮಾಜಿ ಮೇಯರ್ ಅನ್ವರುಝಮಾನ್ ಚೌಧರಿ ದೂರು ದಾಖಲಿಸಿದ್ದಾರೆ.
ಇನ್ನು ಈ 62 ಆರೋಪಿಗಳಲ್ಲಿ ಯೂನಸ್ ಅವರ ಕ್ಯಾಬಿನೆಟ್‌ನ ಎಲ್ಲಾ ಸದಸ್ಯರು ಮತ್ತು ತಾರತಮ್ಯ ವಿರೋಧಿ ಒಕ್ಕೂಟದ ವಿದ್ಯಾರ್ಥಿ ನಾಯಕರು ಸೇರಿದ್ದಾರೆ. ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ ಅವಾಮಿ ಲೀಗ್‌ನ ಕಾರ್ಯಕರ್ತರು ದೇಶದಲ್ಲಿ ಹತ್ಯಾಕಾಂಡಕ್ಕೆ ಬಲಿಯಾಗಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.
ಮೊಹಮ್ಮದ್ ಯೂನಸ್ ವಿರುದ್ಧ ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು ಕಾನೂನು ಜಾರಿ ಸಂಸ್ಥೆಗಳು ಮತ್ತು ಅವಾಮಿ ಲೀಗ್‌ನ ಸದಸ್ಯರ ಮೇಲೆ ದೌರ್ಜನ್ಯ ಮತ್ತು ಜನಾಂಗೀಯ ಹತ್ಯೆಯ ಆರೋಪಗಳಿವೆ.