newsics.com
ಗುಜರಾತ್: 15 ವರ್ಷದಿಂದ ತಮ್ಮೊಂದಿಗೆ ಇದ್ದ ಕಾರ್ ನ್ನು ಮಣ್ಣು ಮಾಡಿರುವ ಘಟನೆ ಗುಜರಾತ್ ನ ಅಮ್ರೇಲಿಯಲ್ಲಿ ನಡೆದಿದೆ. ಹೌದು, ತಮ್ಮ ಇಡೀ ಕುಟುಂಬಕ್ಕೆ ಲಕ್ಕಿ ಎನಿಸಿದ್ದ ವಾಹನವನ್ನು ಮಣ್ಣು ಮಾಡುವ ಮೂಲಕ ಕುಟುಂಬವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯನ್ನುಂಟು ಮಾಡಿದೆ. ಸದ್ಯ ಈ ಸಂಬಂಧ ವಿಡಿಯೋಗಳು ವೈರಲ್ ಆಗಿವೆ.
ಸಂಜಯ್ ಪೊಲ್ರಾ ಎಂಬ ಉದ್ಯಮಿಯೊಬ್ಬರು 15 ವರ್ಷದ ಕಾರಿಗೆ ಮನುಷ್ಯರಿಗೆ ಮೃತಪಟ್ಟಾಗ ಸಲ್ಲಿಸುವ ಅಂತಿಮ ವಿಧಿ ವಿಧಾನಗಳು ಹೇಗಿರುತ್ತವೆಯೋ ಹಾಗೆಯೇ ಕಾರ್ ಗೆ ಸಲ್ಲಿಸಿ ಮಣ್ಣು ಮಾಡಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ಸುಮಾರು 1500 ಜನರು ನೆರೆದಿದ್ದರು.ಇನ್ನು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ ಕೊಡಲು ಅರ್ಚಕರು, ಪುರೋಹಿತರು ಸಹ ಅಲ್ಲಿಗೆ ಬಂದು ಮಂತ್ರಘೋಷಗಳೊಂದಿಗೆ 15 ವರ್ಷದ ವ್ಯಾಗನ್ ಆರ್ ಕಾರ್ ನ್ನು ಮಣ್ಣು ಮಾಡಲಾಯ್ತು.ಕಾರನ್ನು ಸಮಾಧಿ ಮಾಡುವ ಮೊದಲು ಅದನ್ನು ಹೂವಿನಿಂದ ಸಿಂಗರಿಸಲಾಗಿತ್ತು. ಅದಕ್ಕೆ ಪೂಜೆ ಸಲ್ಲಿಸಿ,ಅದನ್ನು ಸಮಾಧಿ ಮಾಡುವ ಜಾಗದಲ್ಲಿ ಅನೇಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು.ಕಾರ್ ಸಮಾಧಿಗಾಗಿಯೇ 15 ಅಡಿ ಆಳದ ಗುಂಡಿಯನ್ನೂ ಕೂಡ ತೋಡಲಾಗಿತ್ತು. ಎಲ್ಲ ವಿಧಿ ವಿಧಾನಗಳು ನಡೆದ ನಂತರ ಅದನ್ನು ಗುಂಡಿಯಲ್ಲಿ ಇಳಿಸಿ ಮಣ್ಣು ಮಾಡಲಾಯ್ತು. ಈ ಒಂದು ಅಂತಿಮ ಕಾರ್ಯ ನೆರವೇರಿಸಲು ಸಂಜಯ್ ಪೊಲ್ರಾ ಅವರು ಸುಮಾರು 4 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕಾರ್ ಸಮಾಧಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ನೆಟ್ಟಿಗರು ಈ ರೀತಿಯೂ ಕೂಡ ಜನರು ಕಾರನ್ನು ಪ್ರೀತಿಸುತ್ತಾರಾ ಎಂದು ಹುಬ್ಬೇರಿಸುತ್ತಿದ್ದಾರೆ.