newsics.com
ಬೆಂಗಳೂರು: 3.14 ಕಿಮೀ ಅಂತರದ ಮಾದಾವರ- ನಾಗಸಂದ್ರ ಮೆಟ್ರೋ ಸಂಚಾರ ಗುರುವಾರ(ನ.7) ಆರಂಭವಾಗಲಿದೆ.
ಕಾರ್ಯಕ್ರಮದ ಮೂಲಕ ರೈಲು ಸಂಚಾರಕ್ಕೆ ದಿನಾಂಕ, ಸಮಯ ನಿಗದಿಯಾಗಿಲ್ಲ. ಹೀಗಾಗಿ ನಾಳೆಯೇ ವಾಣಿಜ್ಯ ಕಾರ್ಯಾಚರಣೆಗೆ ಮುಕ್ತಗೊಳ್ಳುತ್ತಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೂಲಗಳು ಮಾಹಿತಿ ನೀಡಿವೆ.
ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಔಪಚಾರಿಕವಾಗಿ ಗುರುವಾರವೇ(ನ.7) ರೈಲು ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಈ ನಡುವೆ ನಾಗಸಂದ್ರ-ಮಾದಾವರ ನಡುವಿನ ಮೆಟ್ರೋ ಸಂಚಾರಕ್ಕೆ ತ್ವರಿತ ಅನುಮತಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಂಸದ ತೇಜಸ್ವಿ ಸೂರ್ಯ ಅವರು ಧನ್ಯವಾದ ತಿಳಿಸಿದ್ದಾರೆ.
ಈ ಹಿಂದೆ ತೇಜಸ್ವಿ ಸೂರ್ಯ ಅವರು ಮೆಟ್ರೋ ಮಾರ್ಗ ಸಂಚಾರಕ್ಕೆ ತ್ವರಿತ ಅನುಮತಿ ನೀಡುವ ವಿಚಾರವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೂಲಕ ಕೇಂದ್ರ ನಗರಾಭಿವೃದ್ದಿ ಸಚಿವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಅಲ್ಲದೆ, ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನೂ ಹಲವು ಬಾರಿ ಭೇಟಿಯಾಗಿ ವಿಸ್ತರಿತ ಹಸಿರು ಮಾರ್ಗದ ತ್ವರಿತ ಕಾರ್ಯಾಚರಣೆಗೆ ಒತ್ತಾಯಿಸಿದ್ದರು.
ಲಘು ವಾಹನ ಡಿಎಲ್ ಉಳ್ಳವರು 7500 ಕೆಜಿಗಿಂತ ಕಡಿಮೆ ತೂಕದ ವಾಹನವನ್ನೂ ಓಡಿಸಬಹುದು: ಸುಪ್ರೀಂ ತೀರ್ಪು
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಕೇಳಿದ ಪ್ರಶ್ನೆಗಳೇನು..?
ರಾಯರ ದರ್ಶನ ಪಡೆದ ರಿಷಿ ಸುನಾಕ್ ; ಅಳಿಯ, ಪುತ್ರಿಯ ಜೊತೆ ಪೂಜೆ ಸಲ್ಲಿಸಿದ ಸುಧಾಮೂರ್ತಿ