newsics.com
ಬೆಂಗಳೂರು : ಸಂಗೀತ ಶೃಂಗೇರಿಯವರ ಹೊಸ ಫೋಟೊ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ಟ್ರೀಟ್ ಫೋಟೊಗ್ರಾಫರ್ ಒಬ್ಬರು ಶೂಟ್ ಮಾಡಿದಂತಹ ಫೋಟೊಗಳು ಇದಾಗಿದ್ದು, ನಟಿ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಡೆನಿಮ್ ಡಂಗ್ರಿ ಡ್ರೆಸ್ ಧರಿಸಿದ್ದು, ಅದಕ್ಕೆ ಪರ್ಪಲ್ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಇದರ ಜೊತೆಗೆ ಹೈ ಹೀಲ್ಡ್ ಶೂಸ್ ಧರಿಸಿ, ಎರಡು ಜಡೆ ಕಟ್ಟಿದ್ದು , ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಬೋಲ್ಡ್ ಲುಕ್ ನೋಡಿ ಅಭಿಮಾಮಿಗಳ ಕಾಮೆಂಟ್ ಸುರಿಮಳೆಯೇ ಸುರಿದಿದೆ.
ಸಂಗೀತ ಶೃಂಗೇರಿಯ ಹೊಸ ಲುಕ್ ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಫೋಟೊಗಳಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ಲೈಕ್ಸ್ , ಸಾವಿರಾರು ಕಾಮೆಂಟ್ಸ್ ಗಳೂ ಬಂದಿವೆ. ಯಾವಾಗ್ಲೂ ಸಿಂಪಲ್ ಆಗಿ ಕಾಣಿಸಿಕೊಳ್ಳುವ ಸಂಗೀತ ಇಲ್ಲಿ ಮಾಡರ್ನ್ ಆಗಿ ಜೊತೆ ತುಂಬಾನೆ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದು, ಕಣ್ಣುಗಳಲ್ಲಿ ಆ ಬೋಲ್ಡ್ ನೆಸ್ ಕಾಣಿಸುತ್ತಿದೆ.