newsics.com
ಉತ್ತರ ಪ್ರದೇಶ: ದೀಪಾವಳಿ ಆಚರಣೆ ವೇಳೆ ಮನೆಯ ದೇವರ ಕೋಣೆಯಲ್ಲಿ ಇಟ್ಟ ದೀಪದಿಂದ ಹೊತ್ತಿಕೊಂಡ ಬೆಂಕಿಯು ಉದ್ಯಮಿ, ಅವರ ಪತ್ನಿ ಮತ್ತು ಅವರ ಮನೆಕೆಲಸದಾಕೆಯ ಜೀವವನ್ನು ಬಲಿ ತೆಗೆದುಕೊಂಡಿತು.
ಮನೆಯ ದೇವರ ಕೋಣೆಯಲ್ಲಿ ಇಟ್ಟ ದೀಪದಿಂದ ಹೊತ್ತಿಕೊಂಡ ಬೆಂಕಿಯು ಉದ್ಯಮಿ ಸಂಜಯ್ ಶ್ಯಾಮ್ ದಾಸನಿ (48), ಅವರ ಪತ್ನಿ ಕನಿಕಾ ದಾಸನಿ (42) ಮತ್ತು ಅವರ ಮನೆಕೆಲಸದ ಛಾಬಿ ಚೌಹಾನ್ (24) ಅವರ ಜೀವವನ್ನು ಬಲಿ ತೆಗೆದುಕೊಂಡಿತು.
ಅಂಬಾಜಿ ಫುಡ್ಸ್ ಮತ್ತು ಬಿಸ್ಕೆಟ್ ತಯಾರಿಕಾ ಘಟಕಕ್ಕೆ ಹೆಸರುವಾಸಿಯಾಗಿದ್ದ ದಾಸನಿ ಕುಟುಂಬ ಪಾಂಡು ನಗರದಲ್ಲಿ ಮೂರು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರು. ದೀಪಾವಳಿ ಹಿನ್ನೆಲೆ ರಾತ್ರಿ, ದಂಪತಿಗಳು ರಾತ್ರಿ ಊಟಕ್ಕೆ ಮೊದಲು ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಿದರು ಮತ್ತು ಮಲಗಲು ಹೋದರು. ದೇವರ ಮನೆಯಲ್ಲಿ ಉರಿಯುತ್ತಿರುವ ದೀಪ ಬೆಂಕಿಯಾಗಿ ಮಾರ್ಪಟ್ಟು, ಬೇಗನೆ ಕೋಣೆಯನ್ನು ಆವರಿಸಿತು, ದಂಪತಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಲ್ಲದೆ, ಶಾಖದ ಕಾರಣ ಕೊಠಡಿಯ ಸ್ವಯಂಚಾಲಿತ ಬಾಗಿಲು ಲಾಕ್ ಆಗಿದ್ದರಿಂದ ಅವರು ಹೊರಬರಲು ಸಾಧ್ಯವಾಗಲಿಲ್ಲ.
ಮನೆಯಲ್ಲಿ ಹೆಚ್ಚು ಮರದ ಕೆತ್ತನೆಗಳ ಡಿಸೈನ್ ಮಾಡಿಸಿದ್ದರಿಂದ ಬೆಂಕಿಯು ವೇಗವಾಗಿ ಹರಡಿತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.