newsics.com
ರಷ್ಯಾ ವಿರುದ್ಧ ಅಮೆರಿಕ ಇನ್ನಷ್ಟು ಕಠಿಣ ಕ್ರಮಕೈಗೊಂಡಿದ್ದು, 398 ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ, ರಷ್ಯಾ-ಉಕ್ರೆನ್ ಯುದ್ಧದ ಸಮಯದಲ್ಲಿ ಈ ಕಂಪನಿಗಳು ರಷ್ಯಾಕ್ಕೆ ಸಹಾಯ ಮಾಡಿವೆ ಎಂದು ಆರೋಪಿಸಿದೆ.
ಅಮೆರಿಕ ನಿಷೇಧಿಸಿರುವ ಕಂಪನಿಗಳಲ್ಲಿ ಭಾರತ, ರಷ್ಯಾ, ಚೀನಾ, ಹಾಂಗ್ಕಾಂಗ್, ಯುಎಇ, ಟರ್ಕಿ, ಥೈಲ್ಯಾಂಡ್, ಮಲೇಷ್ಯಾ, ಸ್ವಿಟ್ಜರ್ಲೆಂಡ್ ಸೇರಿದಂತೆ ಹನ್ನೆರಡು ದೇಶಗಳ ಕಂಪನಿಗಳು ಸೇರಿವೆ.
ಈ 398 ಕಂಪನಿಗಳು ರಷ್ಯಾಕ್ಕೆ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಿವೆ. ರಷ್ಯಾ ಮೇಲೆ ವಿಧಿಸಲಾದ ಸಾವಿರಾರು ನಿರ್ಬಂಧಗಳನ್ನು ತಪ್ಪಿಸಿ ಸಹಾಯ ಮಾಡುತ್ತಿವೆ ಎಂದು ಅಮೆರಿಕಾದ ಕಡೆಯಿಂದ ಹೊರಡಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಮೆರಿಕಾದ ಹಣಕಾಸು ಮತ್ತು ವಿದೇಶಾಂಗ ಇಲಾಖೆಗಳು ಈ ವಿಷಯದಲ್ಲಿ ಜಂಟಿ ಕ್ರಮಕೈಗೊಂಡು ಈ ಕಂಪನಿಗಳನ್ನು ನಿಷೇಧಿಸಿವೆ.