newsics.com
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬೆಂಗಳೂರು ಭರ್ಜರಿ ಸಿದ್ಧತೆ ಮಾಡಿದ್ದು, ನಗರದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಇತ್ತ ಪಟಾಕಿ ಮಾರಾಟ ಕೂಡ ಜೋರಾಗಿದೆ.
ಬೆಂಗಳೂರಿನ ಚಾಮರಾಜಪೇಟೆ ಸೇರಿ ಹಲವೆಡೆ ಮೈದಾನಗಳಲ್ಲಿ ಪಟಾಕಿ ಸ್ಟಾಲ್ಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತಿದೆ. ಮೊದಲ ದಿನವಾದ್ದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಇದ್ದರೂ ಕೂಡ ಹಾಕಿರುವ ಬಂಡವಾಳಕ್ಕೆ ತಕ್ಕ ವ್ಯಾಪಾರ ಆಗುತ್ತಿರುವುದಕ್ಕೆ ವ್ಯಾಪಾರಿಗಳು ಖುಷಿಯಾಗಿದ್ದಾರೆ. ಇನ್ನು ಹಸಿರು ಪಟಾಕಿಗಳ ಮಾರಾಟ ಮಾಡಲು ಮಾತ್ರ ಅವಕಾಶ ಕೊಟ್ಟಿರುವುದರಿಂದ ಪೊಲೀಸರು ನೀಡಿರುವ ಮಾರ್ಗಸೂಚಿಯಂತೆಯೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪಟಾಕಿ ವ್ಯಾಪಾರ ನಡೆಸಲಾಗುತ್ತಿದೆ.
ಪಟಾಕಿ ಸಿಡಿಸುವವರಿಗೆ ಪೊಲೀಸರ ಸಲಹೆಗಳೇನು?
- ಲೈಸೆನ್ಸ್ ಪಡೆದ ಅಂಗಡಿಯಿಂದ ಮಾತ್ರ ಪಟಾಕಿ ಖರೀದಿಸಿ.
- ಅತಿ ಹೆಚ್ಚು ಶಬ್ದ,ಮಾಲಿನ್ಯ ಉಂಟು ಮಾಡೋ ಪಟಾಕಿ ಬೇಡ.
- ಚಿಕ್ಕ ಮಕ್ಕಳು ಒಬ್ಬರೇ ಪಟಾಕಿ ಹಚ್ಚಲು ಬಿಡಬಾರದು.
- ತೆರೆದ ಮೈದಾನ, ಕಡಿಮೆ ಜನರಿರೋ ಪ್ರದೇಶದಲ್ಲಿ ಮಾತ್ರ ಪಟಾಕಿ ಸಿಡಿಸಿ.
- ಪಟಾಕಿ ಹಚ್ಚುವ ಕಡೆ ಬೆಂಕಿ ನಿರೋಧಕ, ನೀರು ಬಳಸಿ.