newsics.com
ಬೆಂಗಳೂರು : ದರ್ಶನ್‌ಗೆ ಜಾಮೀನು ಸಿಕ್ಕ ಹಿನ್ನೆಲೆ ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಟನ 20 ಅಡಿ ಮತ್ತು 10 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದಾರೆ.
ಜೊತೆಗೆ ಪಟಾಸಿ ಸಿಡಿಸಿ ನಟನ ಹೆಸರಲ್ಲಿ ಅನ್ನದಾನ ಮತ್ತು ಸಿಹಿ ತಿನಿಸುಗಳನ್ನು ಏರಿಯಾದ ಜನರಿಗೆ ಫ್ಯಾನ್ಸ್ ಹಂಚಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ದರ್ಶನ್ ಪುತ್ರನಿಗೂ ಡಬಲ್ ಧಮಾಕ ಸಿಕ್ಕಂತಾಗಿದೆ. ತಂದೆಯ ಜೊತೆ ಅ.31ರಂದು ಹುಟ್ಟುಹಬ್ಬ ಮತ್ತು ದೀಪಾವಳಿ ಹಬ್ಬದ ಡಬಲ್ ಸೆಲೆಬ್ರೇಶನ್ ಮಾಡಲಿದ್ದಾರೆ ವಿನೀಶ್.