newsics.com
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ನಾಮಪತ್ರ ಸಲ್ಲಿಕೆಗೆ 5 ನಿಮಿಷ ಬಾಕಿಯಿರುವ ವೇಳೆ ಅಜಿತ್ ಪವಾರ್ ಬಣದ NCP ನಾಯಕ ನವಾಬ್ ಮಲಿಕ್ ಪಕ್ಷದ `ಬಿ’ ಫಾರಂ ಪಡೆದುಕೊಂಡರು.
ಇದೇ ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮನ್‌ಖುರ್ದ್ ಶಿವಾಜಿ ನಗರ ಕ್ಷೇತ್ರದಿಂದ ಅಧಿಕೃತವಾಗಿ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ. ಅಜಿತ್ ಪವಾರ್ ಎನ್‌ಸಿಪಿ ಬಣದ ಪ್ರಮುಖ ನಾಯನಾಗಿರುವ ನವಾಬ್ ಮಲಿಕ್, ಸಮಾಜವಾದಿ ಪಕ್ಷದ ಪ್ರಭಾವಿ ಅಬು ಅಜ್ಮಿ ವಿರುದ್ಧ ಮುಖಾಮುಖಿಯಾಗಿದ್ದಾರೆ.