newsics.com
ತೆಲಂಗಾಣ: ವ್ಯಕ್ತಿಯೊಬ್ಬರು ರಾತ್ರಿ ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಅವರ ಪೋಷಕರು ಅಂಧರಾಗಿದ್ದರಿಂದ ಅವರಿಗೆ ತಮ್ಮ ಮಗನ ಸಾವಿನ ಬಗ್ಗೆ ತಿಳಿದಿರಲಿಲ್ಲ. ನಾಗೋಲ್‌ನಲ್ಲಿ ದಾರುಣ ಘಟನೆಯೊಂದು ನಡೆದಿದೆ.
ಅಂಧ ದಂಪತಿಗಳಾದ ಕೆ. ರಮಣ ಮತ್ತು ಕೆ. ಶಾಂತಾ ಕುಮಾರಿ ಅವರಿಗೆ 4 ದಿನಗಳ ಹಿಂದೆ ಅವರ ಮಗ ಪ್ರಮೋದ್ ರಾತ್ರಿ ಊಟ ಬಡಿಸಿದ್ದರು. ನಂತರ ಮಗ ಮಲಗಿದ್ದನು. ದುರದೃಷ್ಟವಶಾತ್, ಆತ ನಿದ್ರೆ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ್ದನು. ಆದರೆ, ಅವರ ಕುರುಡುತನದಿಂದಾಗಿ ಅವರಿಗೆ ತಮ್ಮ ಮಗ ತೀರಿಕೊಂಡಿದ್ದಾನೆ ಎಂದು ಅವನ ಹೆತ್ತವರಿಗೆ ತಿಳಿಯಲೇ ಇಲ್ಲ.
ನೆರೆಹೊರೆಯವರು ದಂಪತಿಯ ಮನೆಗೆ 4 ದಿನಗಳ ನಂತರ ಪ್ರವೇಶಿಸಿದರು. ಪೋಲೀಸ್ ಅಧಿಕಾರಿಯ ಪ್ರಕಾರ, ತಮ್ಮ ಮಗನ ಸಾವಿನ ಬಗ್ಗೆ ತಿಳಿದ ನಂತರ, ಪೋಷಕರು ಆಘಾತಕ್ಕೊಳಗಾದರು. ಅಲ್ಲದೆ ಮಗ ಊಟ ಬಡಿಸಿದ ಬಳಿಕ 4 ದಿನಗಳ ಕಾಲ ಅವರು ಆಹಾರ ಅಥವಾ ನೀರು ಏನೂ ಸೇವಿಸದೆ ರೂಂನಲ್ಲೇ ಇದ್ದರು. ಅವರ ಸ್ಥಿತಿ ಕೈಕಾಲು ಕೂಡ ಚಲಿಸಲಾರದಂತಾಗಿತ್ತು.
ನಾಲ್ಕು ದಿನಗಳ ನಂತರ, ಮನೆಯಿಂದ ದುರ್ವಾಸನೆ ಬರುತ್ತಿದ್ದು, ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿ ಒಳಪ್ರವೇಶಿಸಿದಾಗ ದಂಪತಿಗಳ ಬಾಯಿಯಿಂದ ನೊರೆ ಬರುತ್ತಿದ್ದುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆ ಮನೆಯಲ್ಲಿ ಮಗನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.