newsics.com
ಹೈದ್ರಾಬಾದ್ : ಸಮಂತಾ ರುತ್ ಪ್ರಭು ಒಬ್ಬ ಹುಡುಗನ ಜೊತೆ ಕೈ ಕೈ ಹಿಡಿದು ನಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅವರ ಡೇಟಿಂಗ್ ಬಗ್ಗೆ ಚರ್ಚೆ ಶುರುವಾಗಿದೆ.
ಸಮಂತಾ 2021ರಲ್ಲಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದರು. ನಾಗ ಚೈತನ್ಯ ನಟಿ ಶೋಭಿತಾ ಅವರನ್ನು ವಿವಾಹವಾಗಲಿದ್ದಾರೆ. ಈಗ 37 ವರ್ಷದ ಸಮಂತಾ ಒಂಟಿಯಾಗಿದ್ದಾರೆ.
ಇತ್ತೀಚೆಗೆ ಸಮಂತಾ ಒಬ್ಬ ಯುವಕನ ಜೊತೆ ಕೈ ಹಿಡಿದುಕೊಂಡು ಇರುವ ವಿಡಿಯೋ ವೈರಲ್ ಆಯಿತು. ಮದುವೆಯೊಂದರಲ್ಲಿ ತೆಗೆದ ಈ ವಿಡಿಯೋ ಅವರ ಹೊಸ ಗೆಳೆಯನ ಬಗ್ಗೆ ವದಂತಿಗಳಿಗೆ ಕಾರಣವಾಯಿತು. ಆ ವ್ಯಕ್ತಿ ಸಮಂತಾ ಅವರ ಆಪ್ತ ಸ್ನೇಹಿತ, ವಿವಾಹಿತ, ಮತ್ತು ವರ್ಷಗಳಿಂದ ಅವರ ಪರಿಚಯಸ್ಥ ಎಂದು ದರ್ಶಿನಿ ಸೂರ್ಯ ಸ್ಪಷ್ಟಪಡಿಸಿದ್ದಾರೆ. ಅವರ ಕುಟುಂಬದ ಕಾರ್ಯಕ್ರಮದಿಂದ ಹೊರಡುವಾಗ ವಿಡಿಯೋ ತೆಗೆಯಲಾಗಿದೆ.