newsics.com
ತೆಲುಗಿನ ಬಿಗ್ ಬಾಸ್ ಸೀಸನ್ 8ಕ್ಕೂ ಅದ್ಧೂರಿ ಚಾಲನೆ ಸಿಕ್ಕಿದೆ. ಸದ್ಯ ನಾಗಾರ್ಜುನ ನಿರೂಪಣೆಯ ತೆಲುಗಿನ ಬಿಗ್ ಬಾಸ್ ಕುರಿತು ಹೊಸ ನ್ಯೂಸ್‌ವೊಂದು ಹೊರಬಿದ್ದಿದೆ. ಹೌದು, ಖ್ಯಾತ ಯೂಟ್ಯೂಬರ್ ಗಂಗವ್ವಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ.

60 ವರ್ಷ ದಾಟಿದರೂ ಯಾವ ಸ್ಪರ್ಧಿಗಳಿಗೂ ಕಮ್ಮಿಯಿಲ್ಲ ಎಂಬಂತೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಗಂಗಮ್ಮಗೆ ನಿನ್ನೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹಬ್ಬಿದೆ. ಶೋನಲ್ಲಿರುವಾಗಲೇ ಈ ಘಟನೆ ನಡೆದಿದ್ದು, ಕೂಡಲೇ ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಗಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ, ‘ಮೈ ವಿಲೇಜ್ ಶೋ’ ಮೂಲಕ ಯೂಟ್ಯೂಬ್‌ನಲ್ಲಿ ಹಾಸ್ಯ ಭರಿತ ವಿಡಿಯೋಗಳಿಂದ ಖ್ಯಾತಿ ಗಳಿಸಿದ್ದ ಗಂಗವ್ವ ಈ ಹಿಂದೆ ‘ಬಿಗ್ ಬಾಸ್ ಸೀಸನ್ 4’ರಲ್ಲಿ ಕೂಡ ಸ್ಪರ್ಧಿಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಅರ್ಧಕ್ಕೆ ಶೋ ತೊರೆದಿದ್ದರು. ಇದೀಗ ಮತ್ತೆ ತೆಲುಗಿನ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ರಂಜಿಸುತ್ತಿದ್ದಾರೆ.