newsics.com
ಬೆಂಗಳೂರು : ಒಂದು ಜಾಹೀರಾತಿನ 50 ಸೆಕೆಂಡ್ ಅವಧಿಗೆ ಮಾಡಿದ ಚಾರ್ಜ್ 5 ಕೋಟಿ ರೂಪಾಯಿ. ಈಕೆ ದೀಪಿಕಾ, ಪ್ರಿಯಾಂಕಾ, ಐಶ್ವರ್ಯ, ಆಲಿಯಾ, ಕತ್ರಿನಾ, ಸಮಂತಾ, ರಶ್ಮಿಕಾ ಯಾರೂ ಅಲ್ಲ. ಯಾರು ಈಕೆ ಎನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ನಯನತಾರಾ. 20 ವರ್ಷಗಳಲ್ಲಿ ಈಕೆ ನಟಿಸಿದ ಚಲನಚಿತ್ರಗಳು 80. ಹಲವು ಫಿಲಂಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದಿವೆ. ಮೊದಲಿನಿಂದಲೂ ಆಕೆಗೆ ನಟಿಯಾಗಬೇಕೆಂಬ ಆಸೆ ಇರಲಿಲ್ಲ. ಅವಳು ಚಾರ್ಟರ್ಡ್ ಅಕೌಂಟೆನ್ಸಿಯಲ್ಲಿ ಸಾಧನೆ ಮುಂದುವರಿಸಲು ಹೊರಟಿದ್ದಳು. ಆದರೆ ಮೊದಲು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಳು ಮತ್ತು ಸಿಎ ಆಗುವತ್ತ ದೃಷ್ಟಿ ನೆಟ್ಟಳು. ಆದರೆ ಅಂತಿಮವಾಗಿ ತನ್ನ ಹೃದಯದ ಮಾತು ಕೇಳಿ ಚಲನಚಿತ್ರ ನಟನೆಗೆ ಪ್ರವೇಶಿಸಿದಳು.
ಕೆಲವು ಹಿಟ್ ಸಿನಿಮಾ ಮಾಡಿ ಸಾಯಿ ಏನಿಸೋಕೊಂಡಿದ್ದ ನಟಿ 2023ರಲ್ಲಿ ಶಾರುಖ್ ಖಾನ್ ಅವರೊಂದಿಗೆ ನಯನತಾರಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಳು. ಜವಾನ್ ಸಿನಿಮಾದಲ್ಲಿ ಅವರ ಜೋಡಿ ಮೋಡಿ ಮಾಡಿತು. ಇತ್ತೀಚೆಗೆ 50 ಸೆಕೆಂಡ್‌ಗಳ ಜಾಹೀರಾತಿಗೆ 5 ಕೋಟಿ ರೂಪಾಯಿಗಳನ್ನು ಪಡೆದಳು ಎಂದು ಸುದ್ದಿ. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೆನ್ನಿಸಿದಳು. ಆಕೆ ಟಾಟಾ ಸ್ಕೈಗಾಗಿ ಮಾಡಿದ ಜಾಹೀರಾತು ಅದು. ನಯನತಾರಾ ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಾಳೆ ಎನ್ನಲಾಗುತ್ತದೆ.