newsics.com
ಕನ್ನಡದ ಕಿರಾತಕ ಚಿತ್ರದಲ್ಲಿ ನಟಿಸಿದ್ದ ಓವಿಯಾ ಖಾಸಗಿ ವಿಡಿಯೋ ಲೀಕ್ ಆಗಿದೆ ಎನ್ನಲಾಗಿದೆ.
ಹೌದು, ಯಶ್ ಜೊತೆ ಕಿರಾತಕ ಸಿನೆಮಾದಲ್ಲಿ ಹಿರೋಯಿನ್ ಆಗಿ ನಟಿಸಿದ್ದ ನಟಿ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಿನ್ನೆಯಿಂದಲೇ ಟ್ರೆಂಡಿಂಗ್ ನಲ್ಲಿರುವ #OviyaLeaked ಭಾರೀ ಸದ್ದು ಮಾಡುತ್ತಿದೆ. ತಮಿಳು, ಮಲೆಯಾಳಂ ಕನ್ನಡ ಸಿನೆಮಾಗಳಲ್ಲಿ ನಟಿಸಿರುವ ಓವಿಯಾ ಕನ್ನಡದಲ್ಲಿ ಎರಡು ಸಿನೆಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ವೈರಲ್ ಆಗಿರೊ ವಿಡಿಯೋ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಟಿ ವಿಡಿಯೋ ನೋಡಿ ಎಂಜಾಯ್ ಮಾಡಿ ಎಂದು ತಮಾಷೆಯ ಉತ್ತರವನ್ನು ನೀಡಿದ್ದಾರೆ. ಅಲ್ಲದೇ, ನೆಟಿಜನ್ ಒಬ್ಬರು ವಿಡಿಯೋ ಹಾಕಿ ಮೇಡಂ ನಿಮ್ಮದು 17 ಸೆಕೆಂಡ್‌ಗಳ ವಿಡಿಯೋ ಇದೆ ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ನಟಿ ನೋಡಿ ಆನಂದಿಸಿ ಎಂದು ಬರೆದಿದ್ದರು. ಅಂತೆಯೇ, ಇನ್ನೊಬ್ಬ ನೆಟಿಜನ್ ಮೇಡಂ ‘ಉದ್ದದ ವೀಡಿಯೊ ಇದೀಯಾ’ ಎಂದು ಕೇಳಿದ್ದರು. ಇದಕ್ಕೆ ನಟಿ ‘ನೆಕ್ಸ್ಟ್ ಟೈಮ್ ಬ್ರೋ’ ಎಂದು ಬರೆದಿದ್ದಾರೆ.
ಸದ್ಯಕ್ಕೆ ಓವಿಯಾ ನೀಡಿರುವ ಈ ಉತ್ತರಗಳ ಕುರಿತು ಚರ್ಚೆಯಾಗುತ್ತಿದೆ. ಯಾಕೆಂದರೆ ಸಾಮಾನ್ಯವಾಗಿ ಈ ತರಹದ ಸುದ್ದಿಗಳಿಗೆ ಸೆಲೆಬ್ರಿಟಿಗಳು ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಆದರೆ.. ಓವಿಯಾ ಮಾತ್ರ ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ.