Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಹೃದಯಾಘಾತಕ್ಕೂ ಮೊದಲು ಏನೆಲ್ಲ ಸಮಸ್ಯೆ ಆಗುತ್ತದೆ..?
ಆರೋಗ್ಯಲೈಫ್‌ಸ್ಟೈಲ್

ಹೃದಯಾಘಾತಕ್ಕೂ ಮೊದಲು ಏನೆಲ್ಲ ಸಮಸ್ಯೆ ಆಗುತ್ತದೆ..?

Share
1 Min Read
SHARE

newsics.com

ಎದೆ ನೋವು ಹೃದಯಾಘಾತದ ಮುಖ್ಯ ಲಕ್ಷಣ. ಎದೆನೋವು ಹೊರತುಪಡಿಸಿಯೂ ಹೃದಯಾಘಾತಕ್ಕೆ ಕೆಲವು ರೋಗಲಕ್ಷಣಗಳು ಇವೆ. ಆರೋಗ್ಯದಲ್ಲಿ ಸಣ್ಣಪ್ರಮಾಣದಲ್ಲಿ ಏರುಪೇರು ಉಂಟಾದಾಗ ಅದನ್ನು ನಿರ್ಲಕ್ಷಿಸಿ ದೊಡ್ಡ ಅನಾಹುತ ಮಾಡಿಕೊಳ್ಳೋರೇ ಹೆಚ್ಚಿದ್ದಾರೆ. ಕೆಲವರಿಗೆ ಹೃದಯಾಘಾತದ ಲಕ್ಷಣಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಲ್ಲ.

ಎದೆಯಲ್ಲಿ ಒತ್ತಡ, ಭಾರ, ಉರಿ ಅಥವಾ ನೋವು ಹೃದಯಾಘಾತದ ಸಾಮಾನ್ಯ ಲಕ್ಷಣ. ಇದಲ್ಲದೇ, ತೋಳುಗಳು ಮತ್ತು ಭುಜಗಳಲ್ಲಿ ನೋವು ಇರುತ್ತದೆ. ಅದು ಕೆಲವೊಮ್ಮೆ ದವಡೆಗೂ ಹರಡುತ್ತದೆ. ಇದು ಕೂಡ ಹೃದಯಾಘಾತದ ಸಂಕೇತ ಆಗಿರಬಹುದು. ಕೆಲವೊಮ್ಮೆ ಈ ನೋವು ಸಂಭವಿಸಿ ಹೋಗುತ್ತದೆ. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯ ಎಂದು ವೈದ್ಯರು ಎಚ್ಚರಿಕೆ ನೀಡ್ತಾರೆ.

ಹೃದಯಾಘಾತದ ಲಕ್ಷಣಗಳು:

ಹೃದಯಾಘಾತದ ಸಂದರ್ಭದಲ್ಲಿ ಅನೇಕ ಬಾರಿ ವಾಕರಿಕೆ ಮತ್ತು ಸ್ವಲ್ಪ ವಾಂತಿ ಪ್ರಾರಂಭವಾಗುತ್ತದೆ. ಕೆಲವರಿಗೆ ಹೊಟ್ಟೆನೋವಿನ ಸಮಸ್ಯೆಯೂ ಬರಬಹುದು. ಹೊಟ್ಟೆ ಮತ್ತು ಹೃದಯದ ನರಗಳ ನಡುವಿನ ಸಂಪರ್ಕವೇ ಇದಕ್ಕೆ ಕಾರಣ. ಹೃದಯದಲ್ಲಿ ಸಮಸ್ಯೆ ಉಂಟಾದಾಗ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದೆ.

ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಎದೆಯಲ್ಲಿ ತೀವ್ರವಾದ ಒತ್ತಡ, ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ದೇಹದ ಬೇರೆ ಬೇರೆ ಭಾಗಗಳಿಗೂ ಹರಡುವ ಸಾಧ್ಯತೆ ಇರುತ್ತದೆ. ಕ್ರಮೇಣ ನೋವು ಭುಜಗಳು, ಕುತ್ತಿಗೆ ಮತ್ತು ಕೆಲವೊಮ್ಮೆ ಬೆನ್ನಿಗೆ ಹರಡುತ್ತದೆ.

ತೋಳು ಮತ್ತು ಭುಜದ ನೋವು ಕೂಡ ಹೃದಯಾಘಾತದ ಒಂದು ಲಕ್ಷಣ. ನೊವು ಬೆನ್ನು ಮತ್ತು ಇತರ ಭಾಗಗಳಿಗೂ ಹರಡುತ್ತದೆ. ಈ ರೀತಿಯ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಂಗಿಲ್ಲ.

ಹೃದಯಾಘಾತ ಸಂಭವಿಸಿದಾಗ ವ್ಯಕ್ತಿಯು ನರಗಳ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟಕ್ಕೆ ತೊಂದರೆ ಆಗುತ್ತದೆ. ಇದು ಹೃದಯಾಘಾತದ ಎರಡನೇ ಸಾಮಾನ್ಯ ಲಕ್ಷಣ.

ಹೃದಯಾಘಾತದ ಲಕ್ಷಣ ಕೆಲವೊಮ್ಮೆ ಗೊತ್ತೇ ಆಗಲ್ಲ. ಸೌಮ್ಯವಾದ (ಮೈಲ್ಡ್) ರೋಗ ಲಕ್ಷಣಗಳನ್ನೂ ಹೊಂದಿರುತ್ತದೆ. ತಲೆ ತಿರುಗುವಿಕೆ ಅಥವಾ ಅನಾನುಕೂಲತೆಯಂತಹ ರೋಗಲಕ್ಷಣಗಳಲ್ಲೂ ಸಂಭವಿಸುತ್ತದೆ.

ಹೃದಯಾಘಾತದ ಸಂದರ್ಭದಲ್ಲಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ಬೆವರು ಶುರುವಾಗುತ್ತದೆ. ತುಂಬಾ ಸುಸ್ತಾದ ಅನುಭವ ಆಗುತ್ತದೆ. ಕೆಲವರು ನಡುಗಲು ಶುರು ಮಾಡ್ತಾರೆ. ಇದು ಕೂಡ ಹೃದಯಾಘಾತದ ಲಕ್ಷಣಗಳಾಗಿರಬಹುದು.

TAGGED:What all the problems before the heart attack..?
Share This Article
Facebook Twitter Copy Link Print
Previous Article ಬಾಗಮತಿ ಎಕ್ಸ್‌ಪ್ರೆಸ್‌ ರೈಲು ಅಪಘಾತ ಹೇಗಾಯ್ತು? ದೋಷ ಯಾರದ್ದು?
Next Article ಇಸ್ರೇಲ್‌ಗೆ ಸಹಾಯ ಮಾಡಬೇಡಿ-ಅರಬ್ ರಾಷ್ಟ್ರಗಳಿಗೆ ಇರಾನ್‌ ಎಚ್ಚರಿಕೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?