newsics.com
ನವದೆಹಲಿ: ಇಸ್ರೇಲ್ ಜೊತೆಗಿನ ಯುದ್ಧ ಮುಂದುವರೆದಿರುವಂತೆಯೇ ತನ್ನ ತೈಲ-ಶ್ರೀಮಂತ ಮಿತ್ರರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ ನೀಡಿದ್ದು, ಇಸ್ರೇಲ್ ಗೆ ನೆರವು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಹೇಳಿದೆ.
ಇರಾನ್ ತನ್ನ ಅರಬ್ ನೆರೆಹೊರೆ ರಾಷ್ಟ್ರಗಳು ಮತ್ತು ಗಲ್ಫ್‌ನಲ್ಲಿರುವ ಅಮೆರಿಕ ಮಿತ್ರರಾಷ್ಟ್ರಗಳಿಗೆ ಕಟುವಾದ ಎಚ್ಚರಿಕೆಯನ್ನು ನೀಡಿದ್ದು, ಇರಾನ್ ಮೇಲಿನ ಯಾವುದೇ ಸಂಭಾವ್ಯ ದಾಳಿನಲ್ಲಿ ಇಸ್ರೇಲ್‌ಗೆ ಮಾಡಲು ತಮ್ಮ ಪ್ರದೇಶಗಳು ಅಥವಾ ವಾಯುಪ್ರದೇಶವನ್ನು ಬಳಸಲು ಅನುವು ಮಾಡಿಕೊಟ್ಟರೆ ತೀವ್ರ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್ ಮತ್ತು ಕತಾರ್‌ನಂತಹ ತೈಲ-ಸಮೃದ್ಧ ರಾಷ್ಟ್ರಗಳನ್ನು ಗುರಿಯಾಗಿಟ್ಟುಕೊಂಡು ರಹಸ್ಯ ರಾಜತಾಂತ್ರಿಕ ಮಾರ್ಗಗಳ ಮೂಲಕ ಎಚ್ಚರಿಕೆಯನ್ನು ರವಾನಿಸಲಾಗಿದೆ.