newsics.com
ಮುಂಬೈ: ಮಹಾರಾಷ್ಟ್ರದ ನಾಸಿಕ್ನ ಫಿರಂಗಿ ಕೇಂದ್ರದಲ್ಲಿ ತರಬೇತಿ ವೇಳೆ ಭಾರತೀಯ ಫೀಲ್ಡ್ ಗನ್ನಿಂದ ಬಂದ ಶೆಲ್ ಸ್ಫೋಟಗೊಂಡ ಪರಿಣಾಮ ಇಬ್ಬರು ಅಗ್ನಿವೀರರು ಗುರುವಾರ ಅಸುನೀಗಿದ್ದಾರೆ.
ನಾಸಿಕ್ ರಸ್ತೆ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
20 ವರ್ಷದ ಗೋಹಿಲ್ ವಿಶ್ವರಾಜ್ ಸಿಂಗ್ ಮತ್ತು 21 ವರ್ಷದ ಸೈಫತ್ ಮೃತ ಅಗ್ನಿವೀರರು. ಗುಂಡಿನ ಚಕಮಕಿಯ ವೇಳೆ ಶೆಲ್ ಸ್ಫೋಟಗೊಂಡ ಪರಿಣಾಮ ಇಬ್ಬರೂ ಗಾಯಗೊಂಡು, ದೇವ್ಲಾಲಿಯ ಆಸ್ಪತ್ರೆಯಲ್ಲಿ ಮೃತಪಟ್ಟರು.
ಹವಿಲ್ದಾರ್ ಅಜಿತ್ ಕುಮಾರ್ ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ದೇವ್ಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಟಾ ಟ್ರಸ್ಟ್ಗಳ ಮಂಡಳಿಗೆ ನೂತನ ಅಧ್ಯಕ್ಷರಾಗಿ ರತನ್ ಟಾಟಾ ಮಲಸಹೋದರ ನೋಯೆಲ್ ಟಾಟಾ ಆಯ್ಕೆ