newsics.com
ಬೆಂಗಳೂರು: ಬಿಗ್ ಬಾಸ್ 10ರಲ್ಲಿ ಹುಲಿ ಉಗುರು ಸುದ್ದಿಯಾಗಿತ್ತು. ಈ ಬಾರಿ ಯಾವ್ಯಾವುದೋ ವಿಚಾರ ಸದ್ದು ಮಾಡುತ್ತಿದೆ.
ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈಗ ಮಹಿಳಾ ಆಯೋಗ ಬಿಗ್ ಶಾಕ್ ನೀಡಿದೆ.
ಬಿಗ್ಬಾಸ್ನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಊಟ ಮತ್ತು ಶೌಚಾಲಯ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಬಿಗ್ಬಾಸ್ ಮನೆಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದರು.
ಆಯೋಗದ ಈ ನಡೆಗೆ ಬೆಚ್ಚಿಬಿದ್ದ ಬಿಗ್ಬಾಸ್ ತಂಡ ನಾವೇ ಬಂದು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಬಿಗ್ಬಾಸ್ ಮನೆ ಪ್ರವೇಶ ಬೇಡ ಎಂದು ಮನವಿ ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿನ ಊಟದ ವಿಚಾರದಲ್ಲಿನ ತಾರತಮ್ಯ ಹಾಗೂ ಶೌಚಾಲಯದ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಆಯೋಜಕರು ಭರವಸೆ ನೀಡಿದ್ದಾರೆ.
ಸ್ವರ್ಗ ನರಕ ಕಾನ್ಸೆಪ್ಟ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಗೆ ಭೇಟಿ ನೀಡಲು ಆಯೋಗದ ಅಧ್ಯಕ್ಷರು ಸಿದ್ದತೆ ಮಾಡಿಕೊಂಡಿದ್ದರು. ಈಗಾಗಲೇ ಸ್ವರ್ಗ ನಿವಾಸಿಗಳಿಗೆ ಸ್ಪರ್ಧಿಗಳಿಗೂ ಮೂರು ಹೊತ್ತು ಗಂಜಿ ಊಟದ ಬದಲು ಪೌಷ್ಟಿಕ ಆಹಾರವನ್ನೇ ನೀಡುತ್ತಿರುವುದಾಗಿ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದೆ. ಎಲ್ಲ ಸಮಸ್ಯೆ ಪರಿಹರಿಸುವ ಭರವಸೆಯನ್ನು ಆಯೋಗಕ್ಕೆ ನೀಡಲಾಗಿದೆ. ಹೀಗಾಗಿ ನರಕದಲ್ಲೂ ಸ್ವರ್ಗ ಸುಖ ಸಿಗುವ ಸಾಧ್ಯತೆ ಹೆಚ್ಚಿದೆ.
ನಟನ ಕ್ರೌರ್ಯ ಬಿಚ್ಚಿಟ್ಟ ಎಸ್ಪಿಪಿ: ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ