ಮಠಕ್ಕೆ ಬರೋಬ್ಬರಿ 3 ಸಾವಿರ ಎಕರೆ ಆಸ್ತಿ ದಾನ ಮಾಡಿದ ಉದ್ಯಮಿ!
newsics.com ರಾಮನಗರ :ಉದ್ಯಮಿ ಪಿಬಿ ಓಸ್ವಾಲ್ ಜೈನ್ ಅವರು ವ್ಯಾಪಾರ ವಹಿವಾಟಿನಿಂದ ಸಂಪಾದಿಸಿದ ಆಸ್ತಿ ಸಂಪತ್ತೆಲ್ಲವನ್ನೂ ದಾನದ ರೂಪದಲ್ಲಿ ಮಠಕ್ಕೆ ದೇಣಿಗೆ ನೀಡಿದ್ದಾರೆ. 78 ವರ್ಷದ ರಾಜಸ್ಥಾನದ ಗಣಿ ಉದ್ಯಮಿ ಪಿ.ಬಿ. ಓಸ್ವಾಲ್ ಜೈನ್ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದರಾಜ ಸ್ವಾಮೀಜಿ ಅವರಿಗೆ ಆಸ್ತಿ ಪತ್ರ ಹಸ್ತಾಂತರಿಸಿದ್ದಾರೆ. ಕಾನೂನಾತ್ಮಕವಾಗಿ ಆಸ್ತಿ ಹಸ್ತಾಂತರ ಮಾಡಿರೋ ಉದ್ಯಮಿ ಪಿ.ಬಿ. ಓಸ್ವಾಲ್ ಜೈನ್, ಕಳೆದ 27 ವರ್ಷಗಳಿಂದ ಪಾಲನಹಳ್ಳಿ ಮಠದ ಜೊತೆ ಒಡನಾಟ ಹೊಂದಿದ್ದರು ಎನ್ನಲಾಗಿದೆ.
Copy and paste this URL into your WordPress site to embed
Copy and paste this code into your site to embed