newsics.com
ಪಾಕಿಸ್ತಾನ : ಮಗಳೇ ತನ್ನ ಮನೆಯಲ್ಲಿದ್ದ 13 ಮಂದಿಗೆ ಊಟದಲ್ಲಿ ವಿಷ ಹಾಕಿ ಸಾಯಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರೋದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ಯುವತಿ ತನ್ನ ಮನೆಯ 13 ಮಂದಿಗೆ ಊಟದಲ್ಲಿ ವಿಷ ಬೆರೆಸಿದ್ದಾಳೆ. ವಿಷದ ಊಟ ತಿಂದ ಮನೆಯವರೆಲ್ಲಾ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.
ಕಳೆದ ಆಗಸ್ಟ್ 19ರಂದೇ ಈ ದಾರುಣ ಘಟನೆ ನಡೆದಿದ್ದು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಭಯಾನಕ ಸತ್ಯ ಬಯಲಾಗಿದೆ. ಮನೆಯವರನ್ನೆಲ್ಲಾ ಬಲಿ ಪಡೆದ ಯುವತಿನ್ನು ಬಂಧಿಸಲಾಗಿದೆ.
ಸಿಂಧ್ ಪ್ರಾಂತ್ಯದ ಖೈರ್ಪುರ್ ಬಳಿಯ ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿರುವ ಈ ಯುವತಿಗೆ ಒಬ್ಬ ಯುವಕನ ಮೇಲೆ ಪ್ರೀತಿಯಾಗಿದೆ. ಪ್ರೇಮಿಸಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ಮನೆಯವರ ಜೊತೆ ಮಾತನಾಡಿದ್ದಾಳೆ. ಆದರೆ ಮನೆಯವರು ಯಾರು ಈ ಪ್ರೀತಿ ಮದುವೆಗೆ ಒಪ್ಪಿಕೊಂಡಿಲ್ಲ.
ಒಂದು ಸಾರಿ ಅಲ್ಲ ಮೂರ್ನಾಲ್ಕು ಬಾರಿ ಹುಡುಗಿ ತನ್ನ ಪ್ರಿಯತಮನ ಮದುವೆ ವಿಚಾರ ಪ್ರಸ್ತಾಪ ಮಾಡಿ ಮದುವೆಗೆ ಕೇಳಿಕೊಂಡಿದ್ದಾಳೆ. ಕೊನೆಗೆ ಮನೆಯವರು ಯಾರು ಮದುವೆಗೆ ಒಪ್ಪದ ಕಾರಣ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಮನೆಯವರಿಗೆ ವಿಷ ಹಾಕುವ ಪ್ಲಾನ್ ಮಾಡಿದ್ದಾರೆ. ಮನೆಯಲ್ಲಿ ರೊಟ್ಟಿ ಅಡುಗೆ ಮಾಡಿದ ಹುಡುಗಿ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಊಟದಲ್ಲಿ ವಿಷ ಬೆರೆಸಿ ಎಲ್ಲರ ಪ್ರಾಣ ಪಡೆದಿದ್ದಾರೆ.