newsics.com
ಬೆಂಗಳೂರು : ಇಲ್ಲೊಬ್ಬಳು ಮಹಿಳೆ ಹೊಟ್ಟೆಪಾಡಿಗಾಗಿ ದುಡಿಯುವ ಡೆಲಿವರಿ ಬಾಯ್ ಜೊತೆಗೆ ಚೌಕಾಸಿ ಮಾಡಿದ್ದಾಳೆ.
ತನ್ನ ಪಾರ್ಸೆಲ್‌ಗೆ 102 ರೂ. ಬಿಲ್ ಆಗಿದ್ರೂ ಕೂಡಾ ಆಕೆ ಪೂರ್ತಿ ಹಣವನ್ನು ಕೊಡದೆ ಕೇವಲ 100 ರೂ. ಕೊಟ್ಟು ಡೆಲಿವರಿ ಹುಡುಗನನ್ನು ಸತಾಯಿಸಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಡೆಲಿವರಿ ಬಾಯ್ ಅಂಗಡಿಯೊಂದರಲ್ಲಿ ಕುಳಿತಿದ್ದ ಮಹಿಳೆಗೆ ಪಾರ್ಸೆಲ್ ಕೊಡುವ ದೃಶ್ಯವನ್ನು ಕಾಣಬಹುದು. ಪಾರ್ಸೆಲ್ ಕೊಟ್ಟು ನಿಮ್ಮ ಬಿಲ್ 102 ರೂ. ಆಯಿತು ಎಂದು ಆತ ಹೇಳಿದಾಗ, ಆ ಮಹಿಳೆ ಕೇವಲ 100 ರೂ. ಕೊಟ್ಟು ನನ್ನ ಬಳಿ ಚಿಲ್ಲರೆ ಹಣ ಇಲ್ಲ ಎಂದು ʼಉಳಿದ 2 ರೂಪಾಯಿಯನ್ನು ಕೊಡದೆ ಸತಾಯಿಸಿದ್ದಾಳೆ. ಆನ್‌ಲೈನ್ ಪೇಮೆಂಟ್ ಮಾಡಿ ಎಂದು ಹೇಳಿದರೂ, ಎಷ್ಟೇ ಕೇಳಿದರೂ ಆಕೆ ಕೊಡಬೇಕಾಗಿದ್ದ ಚಿಲ್ಲರೆ ಹಣವನ್ನು ಕೊಡದೇ ಇದ್ದಾಗ ಕೊನೆಗೆ ಆ ಡೆಲಿವರಿ ಬಾಯ್ ಅಲ್ಲಿಂದ ಹೋಗಿದ್ದಾನೆ.
ಪಾರ್ಸೆಲ್ ಕೊಡಲು ಬಂದ ಡೆಲಿವಲಿ ಬಾಯ್ ಜೊತೆಗೆಯೇ ಮಹಿಳೆಯೊಬ್ಬಳು ಚೌಕಾಸಿ ಮಾಡಿದ್ದು, ಆತನಿಗೆ ಕೊಡಬೇಕಾದ ಸಂಪೂರ್ಣ ಹಣವನ್ನು ಕೊಡದೆ ಸತಾಯಿಸಿದ್ದಾಳೆ. ಈ ದೃಶ್ಯ ಡೆಲಿವರಿ ಹುಡುಗನ ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.