newsics.com
ಬೆಂಗಳೂರು : ಕನ್ನಡಿಗರ ಮನಗೆದ್ದಿದ್ದ ಭಟ್ ಎನ್ ಭಟ್ (Bhat N Bhat) ಹೆಸರಿನ ಯೂಟ್ಯೂಬ್ ಖ್ಯಾತಿಯ ಸುದರ್ಶನ್ ಭಟ್ ಬೆದ್ರಡಿ ಇಂದು ಕೃತಿ ಎನ್ನುವವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಮೂಲಕ ಕರಾವಳಿಯ ಅಡುಗೆಗಳ ಬಗ್ಗೆ ತಮ್ಮ ವಿಭಿನ್ನ ನಿರೂಪಣೆ ಮಾಡುತ್ತಾ, ಅಡುಗೆ ಮಾಡುತ್ತಿದ್ದ ವಕೀಲ ಸುದರ್ಶನ್ ಭಟ್ ಬೆದ್ರಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ
ವೃತ್ತಿಯಲ್ಲಿ ವಕೀಲರಾಗಿರುವ ಸುದರ್ಶನ್ ಭಟ್ (Sudarshan Bhat Bedradi), ಪ್ರವೃತ್ತಿಯಲ್ಲಿ ಒಳ್ಳೆಯ ಅಡುಗೆ ಭಟ್ಟರು ಆಗಿದ್ರು. ಇಂದು ಸುದರ್ಶನ್ ಪುತ್ತೂರು ಹವ್ಯಾಕ ಸಭಾ ಭವನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೃತಿ ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದಾರೆ.