newsics.com
ಬೆಂಗಳೂರು : ಬಳ್ಳಾರಿ ಜೈಲಿನಲ್ಲಿ 36 ದಿನಗಳನ್ನು ಕಳೆದಿರೋ ನಟ ದರ್ಶನ್ ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರಲಿದ್ದು, ಜಾಮೀನು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಬಳ್ಳಾರಿ ಜೈಲಿಗೆ ಭೇಟಿ ನೀಡಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ಅಪ್ಪ-ಮಗನ ನಡುವೆ ಮಿಸ್ ಯೂ ಸಂಭಾಷಣೆ ನಡೆದಿದೆ.
ಅಪ್ಪನನ್ನು ನೋಡ್ತಿದ್ದಂತೆ ಪುತ್ರ ವಿನೇಶ್ ಐ ಮಿಸ್ ಯೂ ಪಪ್ಪಾ ಎಂದಿದ್ದಾನೆ. ದರ್ಶನ್ ಕೂಡ ಮಿಸ್ ಯೂ ಮಗನೇ ಎಂದಿದ್ದು ಆದಷ್ಟು ಬೇಗ ಜೈಲಿನಿಂದ ಹೊರಬರ್ತೀನಿ, ನಿನ್ನ ಜೊತೆ ಸಮಯ ಕಳೀತೀನಿ ಎಂದಿದ್ದಾರಂತೆ.
ಸತತ 8 ಬಾರಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿದ್ದು ನಾಳೆ ಬೇಲ್ ಸಿಗುತ್ತೋ, ಇಲ್ವೋ ಅಂತ ದರ್ಶನ್ ಚಡಪಡಿಸ್ತಿದ್ದಾರೆ ಎನ್ನಲಾಗಿದೆ. ಬೆನ್ನುನೋವು, ಕೈ ಮೂಳೆಯ ನೋವಿನಿಂದ ಬಳಲುತ್ತಿದ್ದು ಜೈಲಿನ ಪೆಸಿಲಿಟಿಗಳು ಸಿಗದೇ ಕಾಟೇರ ಹೈರಾಣಾಗಿದ್ದಾರೆ.
ಆತ್ಮ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ BMTC ಎಂಡಿಗೆ ಪತ್ರ