newsics.com
ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್ ನಲ್ಲಿ ಪ್ರಯಾಣಿಕನೊಬ್ಬ ಹುಚ್ಚಾಟ ಮೆರೆದಿದ್ದು ಬಸ್ ನಿರ್ವಾಹಕನ ಹೊಟ್ಟೆಗೆ ಚಾಕು ಇರಿದಿರುವ ಘಟನೆ ವೈಟ್‌ಫೀಲ್ಡ್‌ನ ಐಟಿಪಿಎಲ್ ಸಮೀಪದ ವೈದೇಹಿ ಆಸ್ಪತ್ರೆ ಜಂಕ್ಷನ್ ಬಳಿ ನಡೆದಿದೆ.
ಸುಮಾರು 7 ಗಂಟೆ ಸುಮಾರಿಗೆ ಜಾರ್ಖಂಡ್ ಮೂಲದ ಆರೋಪಿ 25 ವರ್ಷದ ಹರ್ಷ ಸಿನ್ಹಾ ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್ ನಿರ್ವಾಹಕ 45 ವರ್ಷದ ಯೋಗೇಶ್ ಗೆ ಚಾಕು ಇರಿದಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೂರಿ ಇರಿತದಿಂದ ಗಾಯಗೊಂಡಿರುವ ಯೋಗೇಶ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಂತರ ಆರೋಪಿ ಹರ್ಷ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ