newsics.com
ನವದೆಹಲಿ: ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಪರಿಹಾರ ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ 5,858.60 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 1,492 ಕೋಟಿ ರೂ., ಆಂಧ್ರಪ್ರದೇಶಕ್ಕೆ 1,036 ಕೋಟಿ ರೂ., ಅಸ್ಸಾಂಗೆ 716 ಕೋಟಿ ರೂ., ಬಿಹಾರಕ್ಕೆ 655.60 ಕೋಟಿ ರೂ., ಗುಜರಾತ್‌ಗೆ 600 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 189.20 ಕೋಟಿ ರೂ., ಕೇರಳಕ್ಕೆ 145.60 ಕೋಟಿ ರೂ., ಮಣಿಪುರಕ್ಕೆ 50 ಕೋಟಿ ರೂ., ಮಿಜೋರಾಂಗೆ ತಲಾ 21.60 ಕೋಟಿ ರೂ., ನಾಗಾಲ್ಯಾಂಡ್‌ಗೆ 19.20 ಕೋಟಿ ರೂ., ಸಿಕ್ಕಿಂಗೆ 23.60 ಕೋಟಿ ರೂ., ತೆಲಂಗಾಣಕ್ಕೆ 416.80 ಕೋಟಿ ರೂ., ತ್ರಿಪುರಾಕ್ಕೆ 25 ಕೋಟಿ ರೂ. ಮತ್ತು ಪಶ್ಚಿಮ ಬಂಗಾಳಕ್ಕೆ 468 ಕೋಟಿ ರೂ. ಬಿಡುಗಡೆ ಮಾಡಿದೆ.
ಪ್ರಸುತ್ತ ವರ್ಷ 14,958 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು 21 ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಸ್‌ಡಿಆರ್‌ಎಫ್‌ನಿಂದ 21 ರಾಜ್ಯಗಳಿಗೆ 9044.80 ಕೋಟಿ ರೂ., NDRFನಿಂದ 15 ರಾಜ್ಯಗಳಿಗೆ 4528.66 ಕೋಟಿ ರೂ., ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎಸ್‌ಡಿಎಂಎಫ್) 11 ರಾಜ್ಯಗಳಿಗೆ 1385.45 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಚಿವಾಲಯ ತಿಳಿಸಿದೆ.