newsics.com
ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಗಜಪಡೆ ಹಾಗೂ ಅಶ್ವಪಡೆಗೆ ಇಂದು ಸಿಡಿಮದ್ದು, ತಾಲೀಮಿನ ಅಂತಿಮ ತರಬೇತಿ ನಡೆಯಿತು. ಇದರಲ್ಲಿ ಗಜಪಡೆ ಮತ್ತು ಅಶ್ವಪಡೆಗಳು ಪಾಸಾಗಿದ್ದು, ಜಂಬೂ ಸವಾರಿ ಮೆರವಣಿಗೆಗೆ ಸಿದ್ಧಗೊಂಡಿವೆ.
ವಸ್ತು ಪ್ರದರ್ಶನ ಪಾರ್ಕಿಂಗ್ ಸ್ಥಳದಲ್ಲಿ ಅಶ್ವಪಡೆ ಹಾಗೂ ಗಜಪಡೆಗೆ ಸಿಡಿಮದ್ದು ತಾಲೀಮಿನ 3ನೇ ಹಾಗೂ ಅಂತಿಮ ತಾಲೀಮು ನಡೆಸಲಾಯಿತು. ಈ ತಾಲೀಮಿನಲ್ಲಿ ಹಿರಿಯ ಆನೆ ವರಲಕ್ಷ್ಮೀ ಹೊರತುಪಡಿಸಿ 13 ಆನೆಗಳು ಭಾಗವಹಿಸಿದ್ದವು. ಇದರ ಜೊತೆಗೆ ಅಶ್ವದಳದ 30 ಕುದುರೆಗಳಿದ್ದವು.
ಕುಶಾಲತೋಪು ಸಿಡಿಸಲು 7 ಫಿರಂಗಿಗಳನ್ನು ಬಳಸಲಾಯಿತು. ಮೂರು ಬಾರಿ 21 ಕುಶಾಲತೋಪುಗಳನ್ನು ಸಿಡಿಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ಭಾಗವಹಿಸಿದ್ದರು.