newsics.com
ಮೈಸೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ಅವರ ಪತ್ನಿ ಸೈಟ್‌ಗಳನ್ನು ವಾಪಸ್ ನೀಡಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಾಪಸ್ ನೀಡಿದ ಕೆಲವೇ ಸಮಯದಲ್ಲಿ 14 ನಿವೇಶನಗಳ ಖಾತೆ ರದ್ದಾಗಿದೆ. ಖುದ್ದು ಸಿಎಂ ಪತ್ನಿ ಪಾರ್ವತಿ ಅವರೇ ಮಂಗಳವಾರ ಮೈಸೂರಿನ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ ಒಟ್ಟು 14 ಮುಡಾ ನಿವೇಶನಗಳ ಖಾತೆ ರದ್ದು ಮಾಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮ್ಮ ಜಮೀನಿಗೆ ಪರಿಹಾರ ನೀಡುವಂತೆ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಂತೆ ಪರಿಹಾರವಾಗಿ ಪಾರ್ವತಿ ಅವರಿಗೆ ಮುಡಾ ವಿಜಯನಗರದ 3 ಮತ್ತು 4ನೇ ಹಂತಗಳಲ್ಲಿ ವಿವಿ‘ ಅಳತೆಯಲ್ಲಿ ಒಟ್ಟು 14 ನಿವೇಶನಗಳನ್ನು ನೀಡಿತ್ತು.
ಇದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಪ್ರಕರಣದಲ್ಲಿ ಈಗ ಇಡಿ ಪ್ರವೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಅವರ ಕುಟುಂಬಕ್ಕೆ ಸಂಕಷ್ಟ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಕೆಲವರ ಸಲಹೆಯಂತೆ ಮುಡಾಗೆ ಸೈಟ್‌ಗಳನ್ನು ವಾಪಸ್ ಮಾಡಿ, ಪ್ರಕರಣದ ಸಂಕಷ್ಟದಿಂದ ತಮ್ಮ ಪತಿ ಸಿಎಂ ಸಿದ್ದರಾಮಯ್ಯನವರನ್ನು ಬಚಾವ್ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಮುಡಾಗೆ 14 ಸೈಟ್ ಮರಳಿಸಿದ ಯತೀಂದ್ರ ಸಿದ್ದರಾಮಯ್ಯ, ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಕ್ರಮ: ಮುಡಾ ಆಯುಕ್ತ