newsics.com
ಆಂಧ್ರಪ್ರದೇಶ: ಚಂದ್ರಬಾಬು ನಾಯ್ಡು ಸರ್ಕಾರ ಹರಿಯಾಣ ಹಾಗೂ ಇತರ ರಾಜ್ಯಗಳ ಮಾದರಿಯಲ್ಲಿಯೇ ರಾಜ್ಯದಲ್ಲಿ ಹೊಸ ಅಬಕಾರಿ ನೀತಿಯನ್ನು ಪರಿಚಯಿಸಲು ಹೊರಟಿದೆ.
ಆಂಧ್ರಪ್ರದೇಶ ಸರ್ಕಾರ 99 ರೂಪಾಯಿಗೆ ಒಂದು ಕ್ವಾರ್ಟರ್ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಸಿಗುವ ಮದ್ಯದ ಬ್ರ್ಯಾಂಡ್ನ್ನು ಸದ್ಯದಲ್ಲಿಯೇ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಮಾದರಿಯ ಮದ್ಯವನ್ನು ಮಾರುಕಟ್ಟೆಗೆ ತರಲು ರಾಷ್ಟ್ರೀಯ ಮದ್ಯ ಪೂರೈಕೆದಾರರಿಗೆ ಸರ್ಕಾರ ಮನವಿ ಮಾಡಿಕೊಂಡಿದೆ.
ಹೊಸ ನೀತಿಯಿಂದಾಗಿ ಕಡಿಮೆ ಆದಾಯ ಇರುವ ಮಧ್ಯಮ ವರ್ಗ ಹಾಗೂ ಕೆಳವರ್ಗದ ಜನರ ಕೈಗೆಟುಕುವ ದರದಲ್ಲಿ ಮದ್ಯ ಸಿಗುವಂತೆ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವುದಕ್ಕೆ ಸಹಾಯಕವಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.