newsics.com
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ.ಗಳ ಪಂದ್ಯದ ಶುಲ್ಕವನ್ನು ನೀಡಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಅಂತಾಭಾರತೀ ಆರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧ್ಯಕ್ಷರೂ ಆಗಿರುವ ಜಯ್ ಶಾ, ಪ್ರತಿ ಫ್ರಾಂಚೈಸಿಯು ಈ ಋತುವಿನಲ್ಲಿ ಪಂದ್ಯದ ಶುಲ್ಕವಾಗಿ 12.60 ಕೋಟಿ ರೂ.ಗಳನ್ನು ನಿಗದಿಪಡಿಸುತ್ತದೆ ಎಂದರು.
ಐಪಿಎಲ್’ನಲ್ಲಿ ಸ್ಥಿರತೆ ಮತ್ತು ಚಾಂಪಿಯನ್ ಅತ್ಯುತ್ತಮ ಪ್ರದರ್ಶನವನ್ನು ಆಚರಿಸುವ ಐತಿಹಾಸಿಕ ಕ್ರಮದಲ್ಲಿ, ನಮ್ಮ ಕ್ರಿಕೆಟಿಗರಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ.ಗಳ ಪಂದ್ಯ ಶುಲ್ಕ ಪರಿಚಯಿಸಲು ಮುಂದಾಗಿದೆ.
ಪ್ರತಿ ಫ್ರಾಂಚೈಸಿ ಈ ಋತುವಿನಲ್ಲಿ ಪಂದ್ಯದ ಶುಲ್ಕವಾಗಿ 12.60 ಕೋಟಿ ರೂ.ಗಳನ್ನು ನಿಗದಿಪಡಿಸುತ್ತದೆ! ಇದು IPL ಮತ್ತು ನಮ್ಮ ಆಟಗಾರರಿಗೆ ಹೊಸ ಯುಗ ಎಂದು ಅವರು ಹೇಳಿದರು.
ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: IPL ಸ್ಟಾರ್ಸ್‌ಗೆ ಮನ್ನಣೆ
ಲೆಬನಾನ್ ಪೇಜರ್ ಸ್ಫೋಟ: ಚೀನಾ ಕಣ್ಗಾವಲು ಉಪಕರಣ ನಿರ್ಬಂಧಕ್ಕೆ ಭಾರತ ನಿರ್ಧಾರ