Newsics.com
ಬೆಂಗಳೂರು : ಬೆಂಗಳೂರಿನ ರಾಜಾಜಿನಗರದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವ ಯುವತಿಯೊಬ್ಬಳಿಗೆ ಆಟೋ ಚಾಲಕನೋರ್ವ ತನ್ನ ಖಾಸಗಿ ಭಾಗವನ್ನು ತೋರಿಸಿ ಲೈಂಗಿಕ ಚೇಷ್ಟೆ ನಡೆಸಿದ್ದಾನೆ.
ಹಾಡ ಹಗಲೇ ತೀರಾ ವಿಕೃತಿಯ ರೀತಿಯಲ್ಲಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಂಗಾಂಗ ತೋರಿಸಿದ್ದಾನೆ.ಈ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಎಲ್ಲ ಚಟುವಟಿಕೆಗಳನ್ನು ಈತ ಗಮನಿಸಿದ್ದಾರೆ. ಆಗ ಬ್ಯೂಟಿ ಪಾರ್ಲರ್ ಇರುವ ಸ್ಥಳದಲ್ಲಿ ಜನರು ಇಲ್ಲದ ವೇಳೆ ಈ ಯುವತಿ ತನಗೆ ಎಲ್ಲಾದರೂ ಒಬ್ಬಂಟಿಯಾಗಿ ಸಿಗುತ್ತಾಳೆಯೇ ಎಂದು ಗಮನಿಸಿದ್ದಾನೆ.ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಂಗಾಂಗ ತೋರಿಸಿದ್ದಾನೆ.
ಈ ವೇಳೆ ಯುವತಿ ಜೋರಾಗಿ ಕೂಗಾಡಿದ್ದಾಳೆ. ಯುವತಿ ಕಿರುಚೋದನ್ನ ನೋಡಿ ಸ್ಥಳೀಯರು ಆಗಮಿಸುತ್ತಿದ್ದಂತೆ ವಿಕೃತ ಕಾಮಿ ಆಟೋ ಚಾಲಕ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಸಂಬಂಧ ಅಪರಿಚಿತ ಆಟೋ ಚಾಲಕನ ಮೇಲೆ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲು ಮಾಡಿದ್ದಾಳೆ.