newsics.com
ಮುಂಬೈ: ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಇದೆ. ಇತ್ತೀಚೆಗೆ ಐಶ್ವರ್ಯಾ ಅವರು ವೆಡ್ಡಿಂಗ್ ರಿಂಗ್ನ ತೆಗೆದಿಟ್ಟು ಓಡಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ, ಈಗ ಅವರು ಮತ್ತೆ ಉಂಗುರ ಧರಿಸಿದ್ದಾರೆ.
ಐಶ್ವರ್ಯಾ ರೈ ಅವರು ವೆಡ್ಡಿಂಗ್ ರಿಂಗ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮೂಲಕ ಐಶ್ವರ್ಯಾ-ಅಭಿಷೇಕ್ ಬೇರೆ ಆಗಿಲ್ಲ ಅನ್ನೋದು ಅಭಿಮಾನಿಗಳಿಗೆ ಮನವರಿಕೆ ಆದಂತೆ ಆಗಿದೆ. ಆದರೆ, ಇನ್ನಷ್ಟು ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಐಶ್ವರ್ಯಾ ರೈ ಎಲ್ಲೇ ಹೋದರು ಮಗಳ ಜೊತೆ ಮಾತ್ರ ತೆರಳುತ್ತಿದ್ದಾರೆ. ಇದು ಅವರ ವಿಚ್ಛೇದನದ ಸುದ್ದಿ ಹುಟ್ಟಲು ಮೂಲ ಕಾರಣ. ಇದು ನಿಜ ಇದ್ದರೂ ಇರಬಹುದು ಎಂಬುದು ಅನೇಕರ ಊಹೆ. ಆದರೆ, ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕ ಬಳಿಕವೇ ಎಲ್ಲವೂ ತಿಳಿಯಲಿದೆ.
https://www.instagram.com/p/DAOWJmbspiX/?igsh=N2V2cDl0enE4N2Q3