Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಲೆಬನಾನ್ ಪೇಜರ್‌ಗಳ ಸ್ಫೋಟಕ್ಕೆ ಕೇರಳ ನಂಟು: ವಯನಾಡಿನ ಟೆಕ್ಕಿ ರಿನಸನ್ ಜೋಸ್, ಹಂಗೇರಿಯ ಕ್ರಿಸ್ಟಿಯಾನಾ ಪಾತ್ರ ಏನು?
ಪ್ರಮುಖವಿದೇಶ

ಲೆಬನಾನ್ ಪೇಜರ್‌ಗಳ ಸ್ಫೋಟಕ್ಕೆ ಕೇರಳ ನಂಟು: ವಯನಾಡಿನ ಟೆಕ್ಕಿ ರಿನಸನ್ ಜೋಸ್, ಹಂಗೇರಿಯ ಕ್ರಿಸ್ಟಿಯಾನಾ ಪಾತ್ರ ಏನು?

Share
2 Min Read
SHARE

newsics.com
ಲೆಬನಾನ್‌: ಪೇಜರ್‌ಗಳ ಸರಣಿ ಸ್ಫೋಟದಲ್ಲಿ ಡಜನ್ಗಟ್ಟಲೇ ಜೀವವನ್ನು ತೆಗೆದುಕೊಂಡು 3 ಸಾವಿರಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ.

ಪೇಜರ್ ಸ್ಫೋಟದ ಹಿಂದಿನ ಶಕ್ತಿ ಇಸ್ರೇಲ್ ಎಂಬುದು ಈಗ ಜಗಜ್ಜಾಹೀರಾಗಿದೆ. ಅದರ ಹಿಂದೆ ಅನೇಕ ಶಕ್ತಿಗಳು ಕೆಲಸ ಮಾಡಿವೆ. ಇಸ್ರೇಲ್ ಅಂದರೇನೇ ಹಾಗೆ. ಎದುರಾಳಿ ಎಂದೂ ಯೋಚಿಸದ, ಕಲ್ಪನೆಯನ್ನೂ ಮಾಡದ ಮಾರ್ಗದ ಮೂಲಕ ಅವರದೇ ನೆಲಕ್ಕೆ ಹೊಕ್ಕು ಅವರನ್ನೇ ಹೊಡೆದುರುಳಿಸುವ ಛಾತಿಯನ್ನು ರೂಢಿಸಿಕೊಂಡು ಬಂದಿದೆ.

ಹಮಾಸ್ ಮುಖ್ಯಸ್ಥನ ಸಾವು, ಹಿಜ್ಬುಲ್ಲಾ ಸಂಘಟನೆಯ ಒಂದೊಂದೇ ಕಮಾಂಡರ್ಗಳು ಇಸ್ರೇಲ್ ದಾಳಿಗೆ ಬಲಿಯಾಗುತ್ತಿರುವುದು. ಪೇಜರ್ ಬ್ಲಾಸ್ಟ್, ವಾಕಿಟಾಕಿ ಬ್ಲಾಸ್ಟ್ ಇವೆಲ್ಲವೂ ಇಸ್ರೇಲ್ ಯಾರೂ ಎಂದೂ ಕಲ್ಪಿಸದ ಹಾದಿಯಲ್ಲೇ ನಡೆದ ಘಟನೆಗಳು.
ಈಗ ಪೇಜರ್ ಬ್ಲಾಸ್ಟ್ ಒಂದು ಜಾಗತಿಕ ಸುದ್ದಿ. ಲೆಬನಾನ್‌ನಲ್ಲಿ ಮೊಬೈಲ್ ಬಳಕೆ ಮಾಡುವ ಬದಲು ಪೇಜರ್ ಇಟ್ಟುಕೊಂಡು ಇಸ್ರೇಲ್ ವಿರುದ್ಧ ಸಂಚು ಹೂಡಲು ಸಜ್ಜಾಗಿದ್ದರು ಎಂಬ ಮಾಹಿತಿ ತಿಳಿದ ಇಸ್ರೇಲ್ ಪೇಜರ್ಗಳನ್ನೇ ಬ್ಲಾಸ್ಟ್ ಮಾಡಿ ಬಿಸಾಕಿತ್ತು. ಈಗ ಅದರ ಹಿಂದೆ ಭಾರತೀಯ ಟೆಕ್ಕಿಯೂ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕೇರಳದ ವಯನಾಡಿನ ರಿನಸನ್ ಜೋಸ್ ಪೇಜರ್ ಹಾಗೂ ವಾಕಿಟಾಕಿ ಸ್ಫೋಟದ ಹಿಂದೆ ಇದ್ದ ವ್ಯಕ್ತಿ ಎಂಬುದು ದೃಢವಾಗಿದೆ.

ಕೇರಳದ ವಯನಾಡು ಜಿಲ್ಲೆಯ ಒಮದಾಯನಗಾಡಿ ಗ್ರಾಮದ ರಿನಸನ್ ಜೋಸ್ ಈಗ ನಾರ್ವೆಯ ನಾಗರಿಕ.

ನೋರ್ಟಾ ಗ್ಲೋಬಲ್ ಎಂಬ ಕಂಪನಿಯ ಮಾಲೀಕನಾಗಿರುವ ರಿನಸನ್ ಜೋಸ್, ನೋರ್ಟಾ ಗ್ಲೋಬಲ್ ಕಂಪನಿಯೇ ಲೆಬನಾನ್ ಹಿಜ್ಬುಲ್ಲಾ ಉಗ್ರರಿಗೆ ಪೇಜರ್ ಪೂರೈಸಿತ್ತು. ಆದರೆ ನೇರವಾಗಿ ನೋರ್ಟಾ ಕಂಪನಿ ಪೂರೈಸಿರಲಿಲ್ಲ. ಹಂಗೇರಿ ದೇಶದ ಬಿಎಸಿ ಕನ್ಸಲ್ಟಿಂಗ್ ಕಂಪನಿಯ ಮೂಲಕ ನೋರ್ಟಾ ಗ್ಲೋಬಲ್ ಪೇಜರ್ ಪೂರೈಸಿದೆ.
ನೋರ್ಟಾ ಗ್ಲೋಬಲ್ ಬಲ್ಗೇರಿಯಾ ದೇಶದಲ್ಲಿರುವ ಕಂಪನಿ. ಇದರ ಮಾಲೀಕ ರಿನಸನ್ ಜೋಸ್. ಕಳೆದ ಮೂರು ದಿನಗಳಿಂದ ಕೇರಳದಲ್ಲಿರುವ ತನ್ನ ಪೋಷಕರು ಸಂಬಂಧಿಕರ ಸಂಪರ್ಕಕ್ಕೆ ರಿನಸನ್ ಜೋಸ್ ಸಿಕ್ಕಿಲ್ಲವಂತೆ. ನಾರ್ವೆಗೆ ಉನ್ನತ ಶಿಕ್ಷಣಕ್ಕೆ ಹೋಗುವುದಾಗಿ ರಿನಸನ್ ಜೋಸ್ ಹೇಳಿಕೊಂಡಿದ್ದಾನೆ. ಆದರೆ ತನ್ನದೇ ಆದ ನೋರ್ಟಾ ಗ್ಲೋಬಲ್ ಕಂಪನಿಯನ್ನು ತೆರೆದಿರುವ ರಿನಸನ್ ಜೋಸ್‌, ಬಿಎಸಿ ಕನ್ಸಲ್ಟಿಂಗ್ ಕಂಪನಿಯ ಮೂಲಕ ತನ್ನ ಪೇಜರ್ಗಳನ್ನು ಹಿಜ್ಬುಲ್ಲಾ ಉಗ್ರರಿಗೆ ರವಾನಿಸಿದ್ದಾನೆ. ಆದರೆ, ಬಲ್ಗೇರಿಯಾದ ಅಧಿಕಾರಿಗಳು ಮಾತ್ರ ಇವು ಬಲ್ಗೇರಿಯಾದಲ್ಲಿ ತಯಾರಾದ ಪೇಜರ್‌ಗಳಲ್ಲ ಎಂದು ಹೇಳುತ್ತಿದ್ದಾರೆ.
ಒಂದು ಕಡೆ ಕೇರಳದ ರಿನಸನ್ ಜೋಸ್‌ನ ಹೆಸರು ಪೇಜರ್ ಬ್ಲಾಸ್ಟ್ ಜತೆ ತಳುಕು ಹಾಕಿಕೊಂಡಿದ್ದರೆ ಮತ್ತೊಂದು ಕಡೆ ಹಂಗೇರಿ ದೇಶದ ಮಹಿಳಾ ಉದ್ಯಮಿಯ ಹೆಸರು ಕೂಡ ಇದರೊಂದಿಗೆ ತಳುಕು ಹಾಕಿಕೊಂಡಿದೆ. ಬಿಎಸಿ ಕಂಪನಿಯ ಮಾಲೀಕಳಾದ ಹಂಗೇರಿ ಮೂಲದ ಕ್ರಿಸ್ಟಿಯಾನಾ ಬಾರ್ಸೋನಿ ಕೂಡ ಈ ಪೇಜರ್ ದಾಳಿಯ ಹಿಂದೆ ಕೈಜೋಡಿಸಿದ್ದು ದೃಢಪಟ್ಟಿದೆ.

ಬಲ್ಗೇರಿಯಾದಿಂದ ನೋರ್ಟಾ ಗ್ಲೋಬಲ್ ಕಂಪನಿಯ ಪೇಜರ್ಗಳು ಕ್ರಸ್ಟಿಯಾನಾ ಬಾರ್ಸೋನಿ ಕಂಪನಿಯಾ ಬಿಎಸಿಗೆ ಬಂದು ಸೇರಿವೆ ಇಲ್ಲಿಂದ ಹಿಜ್ಬುಲ್ಲಾ ಉಗ್ರರಿಗೆ ಪೇಜರ್‌ಗಳು ರವಾನೆಯಾಗಿವೆ.
ಕ್ರಿಸ್ಟಿಯಾನಾ ಬಾರ್ಸೋನಿಯ ಬಿಎಸಿ ಕಂಪನಿ ಪೇಜರ್ ಡಿಸೈನ್ ಮಾಡಲು ತೈವಾನ್ ಪೇಜರ್ ಉತ್ಪಾದನಾ ಕಂಪನಿಯಿಂದ ಲೈಸೆನ್ಸ್ ಪಡೆದಿತ್ತು, ಹೀಗಾಗಿ ಈ ಕಂಪನಿ ರಿನಸನ್ ಜೋಸ್ ಕಂಪನಿಯಿಂದ ಪೇಜರ್ಗಳನ್ನು ಪಡೆದು ಅವುಗಳನ್ನು ಹಿಜ್ಬುಲ್ಲಾ ಉಗ್ರರಿಗೆ ಮಾರಿದೆ.

ಸದ್ಯ ಒಂದು ಕಡೆ ರಿನಸನ್ ಜೋಸ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇತ್ತ ಕ್ರಿಸ್ಟಿಯಾನಾ ಬಾರ್ಸೋನಿಯಾ ಕೂಡ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ನನ್ನ ತಾಯಿಯವರ ಮನೆ‌ ನಿಮ್ಮ ಕಾರಿನಷ್ಟೇ ದೊಡ್ಡದು..! ಒಬಾಮಾ ಬಳಿ ಮೋದಿ ಮನದಾಳದ ಮಾತು

ನೈಟ್ ಹೊತ್ತು ನಿಮ್ಮ ಸಂಗಾತಿ ಸಹಕರಿಸಬೇಕಾ? ಈ ಹಣ್ಣು ತಿನ್ನಿಸಿ!

ಮಗುವಿನ ಜೀವದ ಜೊತೆ ತಾಯಿ ಚೆಲ್ಲಾಟ; ಆಗಿದ್ದೇನು..?

TAGGED:Kerala link to explosion of pagers in Lebanon
Share This Article
Facebook Twitter Copy Link Print
Previous Article ಶುಭೋದಯ… ದಿನ ಭವಿಷ್ಯ 22-09-2024, ಭಾನುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?
Next Article ರಾಜ್ಯದ ಖಾಸಗಿ ಬ್ರ್ಯಾಂಡ್‌ಗಳ ತುಪ್ಪ ಪರೀಕ್ಷೆಗೆ ಸರ್ಕಾರ ಸೂಚನೆ: ಎರಡು ದಿನಗಳ ಗಡುವು

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?