Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನನ್ನ ತಾಯಿಯವರ ಮನೆ‌ ನಿಮ್ಮ ಕಾರಿನಷ್ಟೇ ದೊಡ್ಡದು..! ಒಬಾಮಾ ಬಳಿ ಮೋದಿ ಮನದಾಳದ ಮಾತು
ದೇಶಪ್ರಮುಖವಿದೇಶ

ನನ್ನ ತಾಯಿಯವರ ಮನೆ‌ ನಿಮ್ಮ ಕಾರಿನಷ್ಟೇ ದೊಡ್ಡದು..! ಒಬಾಮಾ ಬಳಿ ಮೋದಿ ಮನದಾಳದ ಮಾತು

Share
2 Min Read
SHARE

newsics.com

ಅಮೆರಿಕ: ಮೊದಲ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಅಂದರೆ 2014ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಜತೆ ನಡೆಸಿದ್ದ ಮಾತುಕತೆ ಈಗ ಭಾರೀ ಸುದ್ದಿಯಾಗುತ್ತಿದೆ.

ಅಂದಿನ ಮಾತಿನ ಕ್ಷಣವನ್ನು ಅಮೆರಿಕದ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ನೆನಪಿಸಿಕೊಂಡಿದ್ದೇ ಇದಕ್ಕೆ ಕಾರಣ.

ಪ್ರಧಾನಿ ಮೋದಿಯವರ ಪ್ರವಾಸದ ಸಂದರ್ಭ, ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತೀಯ ರಾಯಭಾರಿಯಾಗಿರುವ ವಿನಯ್ ಕ್ವಾತ್ರಾ ಅವರು 2014ರ ಪ್ರಧಾನ ಮಂತ್ರಿಯ ಯುಎಸ್ ಭೇಟಿಯ ಸ್ಮರಣೀಯ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಆಗ ಒಬಾಮಾ ಅವರ ಕಾರನ್ನು ನೋಡಿ ಅಚ್ಚರಿಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿಮ್ಮ ಕಾರು ಹೆಚ್ಚೂ ಕಡಿಮೆ ನನ್ನ ತಾಯಿ ವಾಸವಾಗಿರುವ ಮನೆಯಷ್ಟೇ ದೊಡ್ಡದಾಗಿದೆ ಎಂದು ಹೇಳಿದ್ದರಂತೆ.

ಪ್ರವಾಸದ ಸಂದರ್ಭ ಉಭಯ ದೇಶಗಳ ನಾಯಕರ ನಡುವಿನ ಔಪಚಾರಿಕ ಚರ್ಚೆಗಳು ಮುಕ್ತಾಯಗೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬರಾಕ್ ಒಬಾಮಾ ಇಬ್ಬರೂ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸ್ಮಾರಕಕ್ಕೆ ತೆರಳಿದ್ದರು.

10ರಿಂದ 12 ನಿಮಿಷಗಳ ಪ್ರಯಾಣ ಅದಾಗಿದ್ದರಿಂದ ಅವರಿಬ್ಬರೂ ಒಬಾಮಾ ಅವರ ವೈಯಕ್ತಿಕ ಕಾರಾದ ಸ್ಟ್ರೆಚ್ ಲಿಮೋಸಿನ್‌ನಲ್ಲಿ ಒಟ್ಟಿಗೆ ಕುಳಿತು ಮಾತಾಡುತ್ತಾ ತೆರಳಿದ್ದರು. ಈ ವೇಳೆ ಅವರಿಬ್ಬರೂ ತಮ್ಮ ಕುಟುಂಬದ ಬಗ್ಗೆ ಮಾತನಾಡತೊಡಗಿದರು. ಈ ಅನೌಪಚಾರಿಕೆ ಮಾತುಕತೆಯ ವಿನಿಮಯದಲ್ಲಿ ಒಬಾಮಾ ಮೋದಿಯವರ ತಾಯಿಯ ಬಗ್ಗೆ ಕೇಳಿದರು. ಆಗ ಮುಗುಳ್ನಕ್ಕ ಪಿಎಂ ಮೋದಿ ಅವರು ಪ್ರಾಮಾಣಿಕ ಮತ್ತು ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದರು.

‘ಒಬಾಮಾ ಅವರೇ, ನೀವು ಇದನ್ನು ನಂಬದಿರಬಹುದು. ಆದರೆ, ನಿಮ್ಮ ಈ ಕಾರು ಎಷ್ಟು ದೊಡ್ಡದಾಗಿದೆಯೋ ನನ್ನ ತಾಯಿ ವಾಸಿಸುವ ಮನೆ ಕೂಡ ಇಷ್ಟೇ ದೊಡ್ಡದಾಗಿದೆ! ನನ್ನ ತಾಯಿ ವಾಸ ಮಾಡುವ ಮನೆಯಷ್ಟು ದೊಡ್ಡದಾದ ಕಾರಿನಲ್ಲಿ ನಾವೀಗ ಪ್ರಯಾಣಿಸುತ್ತಿದ್ದೇವೆ’ ಎಂದು ಹೇಳಿದ್ದರು.

ಮೋದಿಯವರ ಈ ಹೇಳಿಕೆ ಅಮೆರಿಕ ಅಧ್ಯಕ್ಷ ಒಬಾಮಾರನ್ನು ಆಶ್ಚರ್ಯಗೊಳಿಸಿತು. ಏಕೆಂದರೆ ಅವರು ಇದ್ದ ಕಾರು ಸ್ಟ್ರೆಚ್ ಲಿಮೋಸಿನ್ ಆಗಿತ್ತು. ಅದು ಬಹಳ ಐಷಾರಾಮಿಯಾದ ದೊಡ್ಡ ಕಾರಾಗಿತ್ತು. ಮೋದಿಯವರು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳಲು ಹಿಂಜರಿಯದೆ ಪ್ರಾಮಾಣಿಕವಾಗಿ ಮಾತನಾಡಿದ್ದು ಒಬಾಮಾ ಅವರಿಗೆ ಬಹಳ ಇಷ್ಟವಾಯಿತು.

ಈ ಮಾತುಕತೆ ವೇಳೆ ಅವರಿಬ್ಬರ ಜತೆಗೆ ಲಿಮೋಸಿನ್‌ನಲ್ಲಿದ್ದ ವಿನಯ್ ಕ್ವಾತ್ರಾ, ಈ ಸಂಭಾಷಣೆಯು ಉಭಯ ನಾಯಕರ ನಡುವಿನ ಆಳವಾದ ಸಂಪರ್ಕದ ಬಿಂದುವಾಗಿದೆ ಎಂದು ಹೇಳಿದ್ದಾರೆ.

ಮುಂದಿನ 5 ದಿನ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

ನೈಟ್ ಹೊತ್ತು ನಿಮ್ಮ ಸಂಗಾತಿ ಸಹಕರಿಸಬೇಕಾ? ಈ ಹಣ್ಣು ತಿನ್ನಿಸಿ!

ವಿವಾದಾತ್ಮಕ ಹೇಳಿಕೆ ನೀಡಿದ ಪ್ರತಾಪ್ ಸಿಂಹ

TAGGED:My mother's house is as big as your car..! Modi's heartfelt words to Obama
Share This Article
Facebook Twitter Copy Link Print
Previous Article ಮುಂದಿನ 5 ದಿನ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಸಾಧ್ಯತೆ
Next Article ನನ್ನ ಮಾತು ಉದ್ದೇಶಪೂರ್ವಕವಲ್ಲ: ‘ಗೋರಿಪಾಳ್ಯ ಪಾಕಿಸ್ತಾನ’ ಹೇಳಿಕೆಗೆ ನ್ಯಾ. ಶ್ರೀಶಾನಂದ ವಿಷಾದ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?