Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಲಡ್ಡು ಪ್ರಸಾದ ವಿವಾದ: ತಿರುಪತಿ ದೇಗುಲ ‘ಶುದ್ಧೀಕರಣ’ಕ್ಕೆ ಮುಂದಾದ ಆಂಧ್ರ ಸರ್ಕಾರ
ದೇಶಪ್ರಮುಖ

ಲಡ್ಡು ಪ್ರಸಾದ ವಿವಾದ: ತಿರುಪತಿ ದೇಗುಲ ‘ಶುದ್ಧೀಕರಣ’ಕ್ಕೆ ಮುಂದಾದ ಆಂಧ್ರ ಸರ್ಕಾರ

Share
2 Min Read
SHARE

newsics.com

ಅಮರಾವತಿ/ತಿರುಪತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆಯಾಗಿ ವಿವಾದ ಸೃಷ್ಟಿಯಾಗಿರುವ ಕಾರಣ ತಿರುಮಲ ವೆಂಕಟೇಶ್ವರ ದೇಗುಲದ ‘ಶುದ್ಧೀಕರಣ’ ಮಾಡುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಈ ಬಗ್ಗೆ ಶನಿವಾರ ಅಧಿಕೃತ ಪ್ರಕಟಣೆ ನೀಡಿರುವ ನಾಯ್ಡು, ‘ಈಗ ಆಗಿರುವ ಅಪಚಾರವನ್ನು ಹೇಗೆ ಸರಿಪಡಿಸಬೇಕು ಎಂಬ ಬಗ್ಗೆ ನಾವು ಮಠಾಧೀಶರು, ಅರ್ಚಕರು ಮತ್ತು ಇತರ ಹಿಂದೂ ಧರ್ಮದ ಉನ್ನತ ಪಂಡಿತರೊಂದಿಗೆ ಸಮಾಲೋಚನೆ ಮಾಡುತ್ತೇವೆ. ಸಂಪ್ರೋಕ್ಷಣೆಯನ್ನು (ಶುದ್ಧೀಕರಣ) ಹೇಗೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸುತ್ತೇವೆ’ ಎಂದಿದ್ದಾರೆ.

ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಸಿದ ಆರೋಪ ಸುಳ್ಳು ಎಂದ ಹಿಂದಿನ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಜಗನ್‌ ಅವಧಿಯಲ್ಲಿ ರಾಜ್ಯದ ಅನೇಕ ದೇವಾಲಯಗಳು ಅಪವಿತ್ರ ಆಗಿವೆ ಎಂಬ ದೂರುಗಳು ಬಂದಿದ್ದವು. ಪ್ರತಿ ಧರ್ಮಕ್ಕೂ ಅದರದ್ದೇ ಆದ ಪಾವಿತ್ರ್ಯವಿದೆ. ಅದನ್ನು ನಮ್ಮ ಸರ್ಕಾರ ಕಾಪಾಡಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಜಗನ್‌ ಅವಧಿಯಲ್ಲಿ ಕೇವಲ 320 ರೂ.ಗೆ ಲಡ್ಡುವಿಗೆ ತುಪ್ಪ ಖರೀದಿಸಲಾಗಿದೆ. ಇಷ್ಟು ಕಡಿಮೆ ದರಕ್ಕೆ ಹೇಗೆ ಖರೀದಿ ಸಾಧ್ಯ?’ ಎಂದಿರುವ ನಾಯ್ಡು, ‘ನಾನು ಅಧಿಕಾರಕ್ಕೆ ಬಂದ ಕೂಡಲೇ ತಿರುಮಲ ದೇವಾಲಯದಲ್ಲಿ ‘ಸ್ವಚ್ಛತಾ ಕೆಲಸ’ (ಅಕ್ರಮಗಳಿಗೆ ಬ್ರೇಕ್‌ ಹಾಕುವ ಕೆಲಸ) ಆರಂಭಿಸಿದೆ. ಕೆಲವು ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಲಡ್ಡು ಗುಣಮಟ್ಟ ಹೆಚ್ಚಿಸುವ ಕ್ರಮ ಆರಂಭಿಸಿದೆ. ಅದರ ಭಾಗವಾಗಿ ಕರ್ನಾಟಕದ ನಂದಿನಿ ತುಪ್ಪ ಖರೀಸಿದಿದ್ದೇವೆ. ಟಿಟಿಡಿ ಹೊಸ ಸಿಇಒ ಇಂಥ ಅನೇಕ ಕ್ರಮ ಕೈಗೊಂಡರು. ಆದರೆ ಹೆಚ್ಚು ಪ್ರಚಾರ ಪಡೆಯದೇ ನಮ್ಮ ಕೆಲಸ ನಾವು ಮುಂದುವರಿಸಿದ್ದೆವು. ಆದರೆ ಈಗ ಲಡ್ಡು ಅಕ್ರಮದ ಬಗ್ಗೆ ದೇವರೇ ನನ್ನನ್ನು ಮಾತಾಡುವಂತೆ ಮಾಡಿದ’ ಎಂದು ವಿವರಿಸಿದ್ದಾರೆ.

ತಿರುಪತಿ ಲಡ್ಡುವಿನ ಶ್ರೇಷ್ಠತೆಯ ಬಗ್ಗೆ ಮಾತನಾಡಿರುವ ಅವರು, ‘ಲಡ್ಡುವಿಗೆ ಶತಮಾನದ ಇತಿಹಾಸವಿದೆ. ಅನೇಕ ಕಡೆ ಇದೇ ರೀತಿಯ ಲಡ್ಡು ತಯಾರಿಕೆ ಯತ್ನ ನಡೆದವು. ಆದರೆ ಆಗಲಿಲ್ಲ. ಅಯೋಧ್ಯೆಯಲ್ಲಿ ಕೂಡ ತಿರುಮಲದಿಂದಲೇ ಕೆಲಸಗಾರರನ್ನು ಕರೆದುಕೊಂಡು ಹೋಗಿ ಲಡ್ಡು ತಯಾರಿಕೆಗೆ ಯತ್ನಿಸಲಾಯಿತು. ಆದರೆ ಸಾಧ್ಯವಾಗಲಿಲ್ಲ. ಹೀಗೆಂದು ನನಗೆ ಅಯೋಧ್ಯೆಯ ಜನರೇ ಹೇಳಿದ್ದಾರೆ’ ಎಂದರು.

ಲಡ್ಡು ಪ್ರಸಾದದ ವಿವಾದ ಹಿನ್ನೆಲೆಯಲ್ಲಿ ತಿರುಪತಿಯ ತಿಮ್ಮಪ್ಪನ ದೇಗುಲದ ಶುದ್ಧೀಕರಣಕ್ಕೆ ಕುಂಭಾಭಿಷೇಕ ನಡೆಸಲು ತಿರುಮಲ ತಿರುಪತಿ ದೇವಾಲಯ ಸಮಿತಿ (ಟಿಟಿಡಿ) ಸಿದ್ಧತೆ ಆರಂಭಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ನನ್ನ ಮಾತು ಉದ್ದೇಶಪೂರ್ವಕವಲ್ಲ: ‘ಗೋರಿಪಾಳ್ಯ ಪಾಕಿಸ್ತಾನ’ ಹೇಳಿಕೆಗೆ ನ್ಯಾ. ಶ್ರೀಶಾನಂದ ವಿಷಾದ

ನನ್ನ ತಾಯಿಯವರ ಮನೆ‌ ನಿಮ್ಮ ಕಾರಿನಷ್ಟೇ ದೊಡ್ಡದು..! ಒಬಾಮಾ ಬಳಿ ಮೋದಿ ಮನದಾಳದ ಮಾತು

ನೈಟ್ ಹೊತ್ತು ನಿಮ್ಮ ಸಂಗಾತಿ ಸಹಕರಿಸಬೇಕಾ? ಈ ಹಣ್ಣು ತಿನ್ನಿಸಿ!

TAGGED:Laddu Prasa Controversy: Andhra Govt Moves To 'Clean Up' Tirupati Temple
Share This Article
Facebook Twitter Copy Link Print
Previous Article ನನ್ನ ಮಾತು ಉದ್ದೇಶಪೂರ್ವಕವಲ್ಲ: ‘ಗೋರಿಪಾಳ್ಯ ಪಾಕಿಸ್ತಾನ’ ಹೇಳಿಕೆಗೆ ನ್ಯಾ. ಶ್ರೀಶಾನಂದ ವಿಷಾದ
Next Article ಲಡ್ಡು ಜಿಡ್ಡು ಲಡಾಯಿ: ಇಂದಿನಿಂದ 11 ದಿನ ಪ್ರಾಯಶ್ಚಿತ್ತ ದೀಕ್ಷೆ- ಡಿಸಿಎಂ ಪವನ್ ಕಲ್ಯಾಣ್

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?