Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮೈಸೂರು ಅರಮನೆ ಆವರಣ ದಾಟಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಿದ ದಸರಾ ಆನೆ‌ ಕಂಜನ್, ಜನ‌ ಕಂಗಾಲು
ಕರ್ನಾಟಕಪ್ರಮುಖ

ಮೈಸೂರು ಅರಮನೆ ಆವರಣ ದಾಟಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಿದ ದಸರಾ ಆನೆ‌ ಕಂಜನ್, ಜನ‌ ಕಂಗಾಲು

Share
1 Min Read
SHARE

newsics.com

ಮೈಸೂರು: ದಸರಾ ಆನೆ ಕಂಜನ್ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ರಸ್ತೆಗೆ ನುಗ್ಗಿ ಅಡ್ಡಾದಿಡ್ಡಿ ಓಡಿದ್ದು, ಜನ ಭಯದಿಂದ ದಿಕ್ಕಾಪಾಲಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಸಾಮಾಜಿಕ‌ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡಿದ್ದು, ಕಾಲಿಗೆ ಕಟ್ಟಿದ್ದ ಸರಪಳಿ ಕಿತ್ತು ಓಡಿದ ಆನೆ‌ ಕಂಜನ್ ನಿಯಂತ್ರಿಸಲು ಮಾವುತರು ಪರದಾಡಿದ್ದಾರೆ. ಕಂಜನ್ ಹಿಂದೆಯೇ ಓಡಿದ ದಸರಾ ಗಜಪಡೆಯ ಆನೆ ಮಹೇಂದ್ರ ಕಂಜನ್‌ನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ಆದರೂ ಸಾಧ್ಯವಾಗಿಲ್ಲ. ಎರಡು ಆನೆ ಓಡುತ್ತಿರುವುದನ್ನು ಕಂಡ ಜನ ಭಯಭೀತರಾಗಿ ಓಡಿದ್ದಾರೆ.

ಅರಮನೆ ಹೊರ ಆವರಣ ದಾಟಿ ಓಡಿದ ಆನೆ ಕಂಜನ್, ದೊಡ್ಡಕೆರೆ‌ ಮೈದಾನದ ಬಳಿಯ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನು ನೋಡಿ ಅಲ್ಲಿಯೇ ನಿಂತಿದೆ. ಬಳಿಕ ಮಾವುತರು ಕಂಜನ್ ಆನೆಯನ್ನು ಸಮಾಧಾನಪಡಿಸಿ ಮರಳಿ ಕರೆತಂದಿದ್ದಾರೆ.

ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಕೆಲ ಕಾಲ ಆತಂಕ ಸೃಷ್ಟಿಯಾದದ್ದಂತೂ ನಿಜ.

ಶುಕ್ರವಾರ ರಾತ್ರಿ 7:45ರ ಸಮಯದಲ್ಲಿ ಆಹಾರ ತಿನ್ನುವ ಸಂದರ್ಭದಲ್ಲಿ ಧನಂಜಯ ಹಾಗೂ ಕಂಜನ್ ಆನೆಗಳ‌ ನಡುವೆ ಗುದ್ದಾಟ ಶುರುವಾಗಿದೆ. ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಏಕಾಏಕಿ ಕಂಜನ್ ಹಾಗೂ ಧನಂಜಯ ಆನೆಗಳು ಓಡುತ್ತಾ ಹೊರಬಂದವು. ಮಾವುತನಿಲ್ಲದ ಕಂಜನ್ ಆನೆಯನ್ನು ಧನಂಜಯ್ ಆನೆ ಅರಮನೆಯಿಂದ ಹೊರಗೆ ಓಡಿಸಿಕೊಂಡು ಬಂದಿದೆ.

ದುಬಾರೆ ಆನೆ ಶಿಬಿರದ 25 ವರ್ಷದ ಕಂಜನ್ ಆನೆ ಎರಡನೇ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ. ಆದರೆ ಈ ಬಾರಿ ಕಾಲಿಗೆ ಗಾಯವಾದ ಕಾರಣ ತಾಲೀಮಿನಿಂದ‌ ವಿನಾಯಿತಿ ನೀಡಿ ವಿಶ್ರಾಂತಿ‌ ನೀಡಲಾಗಿತ್ತು. ಅರಮನೆಯಿಂದ ಹೊರಗೆ ಓಡುವಾಗಲೂ ಅದು ಕುಂಟುತ್ತಾ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ನಾಡೋಜ ಡಾ.ಹಂಪನಾ ಈ ಬಾರಿಯ ದಸರಾ ಉದ್ಘಾಟಕರು: ಸಿಎಂ ಘೋಷಣೆಗೆ ಹಿರಿಯ ಸಾಹಿತಿ ಸಂತಸ

ಮೈಸೂರು ದಸರಾಗೆ 1 ಲಕ್ಷ ವಿದ್ಯುತ್ ದೀಪಗಳಿಂದ ಅರಮನೆ ಅಲಂಕಾರ

TAGGED:Dussehra elephant Kanjan who ran across the Mysore Palace premises and ran across the roadpeople were saddened.
Share This Article
Facebook Twitter Copy Link Print
Previous Article ಪಿಎಂ‌ ವಾಣಿ ಯೋಜನೆಗೆ ಮತ್ತಷ್ಟು ಬಲ: ದೇಶದಲ್ಲಿ 5 ಕೋಟಿ ವೈಫೈ ಹಾಟ್‌ಸ್ಪಾಟ್ ಸ್ಥಾಪನೆಗೆ ತೀರ್ಮಾನ, ದುಬಾರಿ ರೀಚಾರ್ಜ್‌ಗೆ ವಿದಾಯ
Next Article ದಿನ ಭವಿಷ್ಯ… 21-09-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

You Might Also Like

ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read
ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?