newsics.com
ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಜೈಲುಪಾಲಾಗಿರುವ ಶಾಸಕ ಮುನಿರತ್ನ (MLA Muniratna) ತನಗೆ ಆಗದವರನ್ನು ಮಟ್ಟ ಹಾಕಲು ಹನಿಟ್ರ್ಯಾಪ್ ಮಾಡಿ ಅವರಿಗೆ ಏಡ್ಸ್ ಸೋಂಕಿತರ ರಕ್ತ ಇಂಜೆಕ್ಟ್ ಮಾಡಿಸುತ್ತಿದ್ದ ಆರೋಪ ಕೇಳಿಬಂದಿದೆ.
ಸಂತ್ರಸ್ತೆ ನೀಡಿರುವ ದೂರಿನಲ್ಲಿ ಇಂತಹ ಭಯಾನಕ ಅಂಶಗಳಿವೆ. ಸಂತ್ರಸ್ತೆಯನ್ನು ಮುಂದಿಟ್ಟುಕೊಂಡು ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದನಂತೆ.
ಮುನಿರತ್ನನ ಈ ಭಯಾನಕ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ಇದೇ ರೀತಿ ತನ್ನ ಎದುರಾಳಿ ಸ್ಥಳೀಯ ಕಾರ್ಪೋರೇಟರ್‌ಗಳನ್ನು ಸೈಲೆಂಟ್ ಮಾಡಿಸಿದ್ದು, ಅದರಲ್ಲಿ ಮಾಗಡಿ ಎಂಎಲ್‌ಎ ಸಹ ಒಬ್ಬರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹನಿಟ್ರ್ಯಾಪ್, ಏಡ್ಸ್ ಹರಡಿಸುವ ಕೃತ್ಯ, ಡ್ರಗ್ಸ್ ದಂಧೆ ಬಗ್ಗೆಯೂ ಎಫ್‌ಐಆರ್‌ನಲ್ಲಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಎದುರಾಳಿಯಾಗಿದ್ದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರ ವಿರುದ್ಧ ಹೊಸ ಷಡ್ಯಂತ್ರ ರೂಪಿಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಮುನಿರತ್ನರಿಂದ HIV ಹನಿಟ್ರ್ಯಾಪ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ರಾಜಕೀಯ ಎದುರಾಳಿಯಾಗಿದ್ದ ಮಾಜಿ ಸಂಸದ ಡಿ ಕೆ ಸುರೇಶ್ ಹಾಗೂ ಕುಸುಮಾ ಹನುಮಂತರಾಯಪ್ಪ ಅವರಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮುನಿರತ್ನ ಅವರಿಂದ ತಂತ್ರಗಾರಿಕೆ ನಡೆದಿತ್ತು ಎನ್ನುವ ಕುರಿತು ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.
ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮೂವರ ತಂಡವನ್ನು ಮುನಿರತ್ನ ನಿಯೋಜಿಸಿದ್ದರು ಎಂದು ಹೇಳಲಾಗಿದೆ. ಈ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡುವ ದಿನವೇ ಕಾಂಗ್ರೆಸ್ ಕಾರ್ಯಕರ್ತರ ತಂಡವನ್ನು ನೋಡಿ ಭಯದಿಂದ ಮೂವರು ಹಿಂಜರಿದಿದ್ದರು ಎನ್ನಲಾಗಿದೆ.
ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬಿಜೆಪಿ ಕಾರ್ಯಕರ್ತೆ: ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು