newsics.com
ಬಾಲಿವುಡ್‌ನ ಒಂದು ಕಾಲದ ಸೂಪರ್ ಹೀರೋಯಿನ್ ಸದ್ಯ ಗಂಡ-ಮನೆ ಮಕ್ಕಳು ಅಂತ ಬ್ಯುಸಿ ಆಗಿದ್ದಾರೆ. ಬಾಲಿವುಡ್ ಬಿಟ್ಟು ಹಾಲಿವುಡ್‌ನಲ್ಲಿಯೇ ಸೆಟಲ್ ಆಗಿರೋ ಪ್ರಿಯಾಂಕಾ ಚೋಪ್ರಾ ತಮ್ಮ ಸೌಂದರ್ಯವನ್ನ ಹಾಗೆ ಕಾಪಾಡಿಕೊಂಡಿದ್ದಾರೆ. ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಓಡಾಡುವಷ್ಟು ಸೌಂದರ್ಯ ಉಳಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಇದೀಗ ಒಂದಿಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಪತಿ ನಿಕ್, ಮಗಳು ಹಾಗೂ ತಾವು ಒಟ್ಟಿಗೆ ಕ್ರೂಸ್‌ನಲ್ಲಿ ಸುಂದರ ಸಮಯ ಕಳೆದಿರೋ ಮ್ಯಾಟರ್ ಇದೆ.

ಪ್ರಿಯಾಂಕಾ ಚೋಪ್ರಾ ಸದ್ಯ ಜಾಲಿ ಮೂಡ್‌ನಲ್ಲಿಯೇ ಇದ್ದಾರೆ. ಮನಸಿಗೆ ಹೇಗೆ ಬೇಕೋ ಹಾಗೆ ಬಿಂದಾಸ್ ಆಗಿಯೆ ಕಾಣಿಸಿಕೊಂಡಿದ್ದಾರೆ. ಕ್ರೂಸ್‌ನಲ್ಲಿ ಬಿಕಿನಿ ತೊಟ್ಟು ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ.

ಪ್ರಿಯಾಂಕಾ ಚೋಪ್ರಾ ಈಗ ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಮಾಡ್ತಿಲ್ಲ ಅನಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ಸುದ್ದಿನೂ ಇಲ್ಲ ನೋಡಿ. ಆದರೂ, ಹಾಲಿವುಡ್‌ನಲ್ಲಿ ಬ್ಯುಸಿ ಇದ್ದಾರೆ. ಅಲ್ಲಿಯೇ ತಮ್ಮ ಜರ್ನಿ ಮುಂದುವರೆಸಿದಂತೆ ಕಾಣಿಸುತ್ತದೆ.