newsics.com
ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಒಂದು ಬಾರಿ ಪಾವತಿ ಮಾಡಲು ನೀಡಿರುವ (ಒನ್-ಟೈಮ್ ಸೆಟ್ಲ್ಮೆಂಟ್ / ಒಟಿಎಸ್) ಅವಕಾಶದ ಗಡುವನ್ನು ರಾಜ್ಯ ಸರ್ಕಾರ ಎರಡನೇ ಬಾರಿ ವಿಸ್ತರಣೆ ಮಾಡಿದೆ. ಗಡುವನ್ನು ನವೆಂಬರ್ 30 ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಫೆಬ್ರವರಿಯಲ್ಲಿ ಪ್ರಾರಂಭಿಸಲಾದ ಒಟಿಎಸ್ ಯೋಜನೆಯು ಬಾಕಿಯ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಮತ್ತು ದಂಡವನ್ನು ಶೇ 50 ರಷ್ಟು ಕಡಿಮೆ ಮಾಡುವ ಮೂಲಕ ತೆರಿಗೆ ಬಾಕಿ ಇರಿಸಿಕೊಂಡಿರುವವರಿಗೆ ರಿಲೀಫ್ ನೀಡಿದೆ. ಮೊದಲ ಬಾರಿಗೆ ಜುಲೈ ವರೆಗೆ ಒಟಿಎಸ್ಗೆ ಅವಕಾಶ ನೀಡಲಾಗಿತ್ತು. ನಂತರ ಯೋಜನೆಯನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಯಿತು. ಇದೀಗ ನವೆಂಬರ್ 30 ಕ್ಕೆ ಗಡುವು ವಿಸ್ತರಣೆ ಮಾಡಲಾಗಿದೆ.
ಒಟಿಎಸ್ ಮೂಲಕ ಬಿಬಿಎಂಪಿ ವಾರ್ಷಿಕ ಆದಾಯದ 5,200 ಕೋಟಿ ರೂ. ಗುರಿ ತಲುಪಲು ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.