newsics.com
ಥೈಲ್ಯಾಂಡ್ ದೇಶದ ಖಾಸಗಿ ಕಂಪನಿಯೊಂದು ಉದ್ಯೋಗಿಗಳಿಗಾಗಿ ಹೊಸ ಆಫರ್ ಘೋಷಿಸಿದೆ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರೇಮಿಗಳಿಗಾಗಿ ಟಿಂಡರ್ ರಜೆ ಎಂಬ ಹೊಸ ರೀತಿಯ ರಜೆ ಘೋಷಿಸಿದೆ. ಈ ರಜೆ ಪಡೆದು, ಉದ್ಯೋಗಿಗಳು ತಮ್ಮ ಲವರ್ ಜೊತೆ ಡೇಟಿಂಗ್ಗೆ ಹೋಗಬಹುದು!
ಮಾರ್ಕೆಟಿಂಗ್ ಏಜೆನ್ಸಿಯಾದ ವೈಟ್ಲೈನ್ ಗ್ರೂಪ್ ಎಂಬ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಈ ತಿಂಗಳಿನಿಂದ ಮುಂಬರುವ ಡಿಸೆಂಬರ್ವರೆಗೆ ಡೇಟಿಂಗ್ಗೆ ಸಮಯಾವಕಾಶವನ್ನು ನೀಡಿ, ಈ ರೀತಿಯ ರಜೆ ಘೋಷಿಸಿದೆ. ಲಿಂಕ್ಡ್ಇನ್ ಪೋಸ್ಟ್ನಲ್ಲಿ, ಕಂಪನಿಯು ಉದ್ಯೋಗಿಗಳಿಗೆ ಯಾರೊಂದಿಗಾದರೂ ಡೇಟಿಂಗ್ ಮಾಡಲು ‘ಟಿಂಡರ್ ರಜೆ’ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ ಎಂದು ಕಂಪನಿ ಹೇಳಿದೆ. ಆದರೆ ಈ ‘ಟಿಂಡರ್ ರಜೆ’ಗೆ ಎಷ್ಟು ದಿನಗಳನ್ನು ನಿಗದಿಪಡಿಸಲಾಗಿದೆ ಎಂಬುದನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.
ವೈಟ್ಲೈನ್ ಗ್ರೂಪ್ ತಮ್ಮ ಉದ್ಯೋಗಿಗಳಿಗೆ ಆರು ತಿಂಗಳ ಉಚಿತ ಟಿಂಡರ್ ಪ್ಲಾಟಿನಂ ಮತ್ತು ಟಿಂಡರ್ ಚಿನ್ನವನ್ನು ಸಹ ನೀಡುತ್ತದೆ ಎನ್ನಲಾಗಿದೆ. ಈ ಕಂಪನಿಯ ಪ್ರಕಾರ ಇದು ತಮ್ಮ ಉದ್ಯೋಗಿಗಳಿಗೆ ಡೇಟಿಂಗ್ ಆಯ್ಕೆಗಳನ್ನು ಹುಡುಕಲು ಮತ್ತು ಡೇಟಿಂಗ್ಗೆ ಹೋಗಲು ವೇತನ ಸಹಿತ ರಜೆ ಘೋಷಿಸಿ, ಅನುಕೂಲ ಮಾಡಿಕೊಡುತ್ತದೆಯಂತೆ. ಉದ್ಯೋಗಿಗಳಿಗೆ ‘ಟಿಂಡರ್ ರಜೆ’ ನೀಡುವುದರಿಂದ ಅವರ ಯೋಗಕ್ಷೇಮವನ್ನು ಹೆಚ್ಚಿಸಲು ಅವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ವರದಿ ಹೇಳಿದೆ.